
ಆಫ್ರಿಕಾದ ಕಲಹರಿ ಮರುಭೂಮಿಯಲ್ಲಿ ಮೀರ್ಕಾಟ್ ಮರಿಗಳ ಗುಂಪು ಮಾರಣಾಂತಿಕ ಮತ್ತು ವಿಷಕಾರಿ ಕೇಪ್ ಕೋಬ್ರಾದೊಂದಿಗೆ ಮುಖಾಮುಖಿಯಾಗಿದೆ. ಮೀರ್ಕಾಟ್ ಮರಿಗಳಿಗೆ ಕೇವಲ 5 ವಾರಗಳಾಗಿದ್ದು, ಮರುಭೂಮಿಯಲ್ಲಿ ಹೇಗೆ ಬದುಕುವುದು ಎಂಬುದನ್ನು ಕಲಿಯುತ್ತಿದೆಯಷ್ಟೇ. ಅಪಾಯಕಾರಿ ಹಾವಿನ ವಿರುದ್ಧ ಪುಟ್ಟ ಮೀರ್ಕಾಟ್ ಒಂದಾದ ಮೇಲೊಂದರಂತೆ ಮುಗಿಬಿದ್ದಿವೆ.
ಮರಿಗಳ ಆಟವನ್ನು ಕಂಡ ವಯಸ್ಕ ಮೀರ್ಕಾಟ್ ಗಳು ನಾಗರಹಾವಿನ ಮುಂದೆ ಬಂದು ಅದರ ದಾಳಿಯನ್ನು ತಪ್ಪಿಸುತ್ತವೆ. ಮೀರ್ಕಾಟ್‌ಗಳು ನಾಗರಹಾವನ್ನು ಕೊಲ್ಲದಿದ್ದರೂ, ಅದು ಹೆಚ್ಚಿನ ಸಂಖ್ಯೆಯಲ್ಲಿರುವುದನ್ನು ಮನಗಂಡು ಹಾವನ್ನು ಹೆದರಿಸುವಲ್ಲಿ ನಿರತವಾಗಿದೆ.
ನ್ಯಾಷನಲ್ ಜಿಯೋಗ್ರಾಫಿಕ್ ಯುಕೆಯು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ ಹಳೆಯ ವಿಡಿಯೋ ಇದಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಕಾಣಿಸಿಕೊಂಡಿದೆ. ಇದು 9.6 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ.
ನಾಗರಹಾವು ಮೀರ್ಕಾಟ್ಗೆ ಏಕೆ ಹೆದರುತ್ತದೆ..?
ಮೀರ್ಕಾಟ್ ಗಳು ಕೆಲವು ವಿಧದ ವಿಷಪೂರಿತ ಹಾವುಗಳಿಂದ ಕಡಿತ ನಿರೋಧಕವಾಗಿದೆ. ಮೀರ್ಕಾಟ್‌ಗಳು ಮುಂಗುಸಿ ಕುಟುಂಬಕ್ಕೆ ಸೇರಿರುವುದರಿಂದ ಕೆಲವು ಹಾವುಗಳ ವಿಷದಿಂದ ನಿರೋಧಕವಾಗಿರುತ್ತವೆ ಎಂದು ಜೀವಶಾಸ್ತ್ರಜ್ಞರು ಕಂಡುಹಿಡಿದಿದ್ದಾರೆ.