alex Certify ಭಾರತ ಸರ್ಕಾರಕ್ಕೆ ಶೇ.36 ಪಾಲು ನೀಡಿದ ವೊಡಾಫೋನ್ – ಐಡಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತ ಸರ್ಕಾರಕ್ಕೆ ಶೇ.36 ಪಾಲು ನೀಡಿದ ವೊಡಾಫೋನ್ – ಐಡಿಯಾ

ಸಂಕಷ್ಟಕ್ಕೆ ಸಿಲುಕಿರುವ ದೇಶದ ಮೂರನೇ ಅತಿದೊಡ್ಡ ವೈರ್‌ಲೆಸ್ ಫೋನ್ ಆಪರೇಟರ್‌ ವೊಡಾಫೋನ್ – ಐಡಿಯಾ ಲಿಮಿಟೆಡ್ ಕಂಪನಿಯು ತನ್ನ ಮಂಡಳಿಯನ್ನ ಬಾಕಿ ಶೇರ್ ಗಳನ್ನ ಇಕ್ವಿಟಿಯಾಗಿ ಪರಿವರ್ತಿಸಲು ಅನುಮೋದಿಸಿದೆ. ಅಂದರೆ ಇನ್ಮುಂದೆ ವೊಡಾಫೋನ್ – ಐಡಿಯಾ ಕಂಪನಿಯ 36% ಶೇರ್ ಭಾರತ ಸರ್ಕಾರ ಹೊಂದಿರುತ್ತದೆ ಎಂದು ಸ್ವತಃ ಕಂಪನಿಯೆ ಹೇಳಿದೆ.

ಈ ಬದಲಾವಣೆಯಿಂದ ಕಂಪನಿಯ ಸ್ಥಾಪಕರು ಸೇರಿದಂತೆ ಅಸ್ತಿತ್ವದಲ್ಲಿರುವ ಎಲ್ಲಾ ಷೇರುದಾರರ ಪಾಲುಗಳು ದುರ್ಬಲವಾಗುತ್ತವೆ ಎಂದು ಇಂದು ಬಿಡುಗಡೆ ಮಾಡಿದ ಸ್ಟಾಕ್ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ಕಂಪನಿ ತಿಳಿಸಿದೆ. ವೊಡಾಫೋನ್ ಗ್ರೂಪ್ ಪಿಎಲ್‌ಸಿ ಸುಮಾರು 28.5% ಮತ್ತು ಆದಿತ್ಯ ಬಿರ್ಲಾ ಗ್ರೂಪ್ ಸುಮಾರು 17.8% ಅನ್ನು ಕಂಪನಿಯಲ್ಲಿ ಹೊಂದಿರುತ್ತದೆ ಎಂದು ಫೈಲಿಂಗ್‌ನಲ್ಲಿ ತಿಳಿಸಲಾಗಿದೆ.

ವೊಡಾಫೋನ್ ಗ್ರೂಪ್ ಮತ್ತು ಬಿಲಿಯನೇರ್ ಕುಮಾರ್ ಮಂಗಳಂ ಬಿರ್ಲಾ ಅವರ ಸಂಘಟಿತ ಸಂಸ್ಥೆಗಳ ನಡುವಿನ ಜಂಟಿ ಉದ್ಯಮವಾದ ವೊಡಾಫೋನ್ – ಐಡಿಯಾಗೆ ಈ ಯೋಜನೆಯು ಅತ್ಯಂತ ನಿರ್ಣಾಯಕವಾಗಿದೆ. ತನ್ನ ಪ್ರತಿಸ್ಪರ್ಧಿಗಳಿಂದ ಗ್ರಾಹಕರನ್ನ ಕಳೆದುಕೊಳ್ಳುತ್ತಿರುವ ಈ ಕಂಪನಿಗೆ ನಷ್ಟದಿಂದ ಹೊರಬರಲು ಸಧ್ಯ ಬೇರೆ ಮಾರ್ಗವಿಲ್ಲ.

2016ರಲ್ಲಿ ಟೆಲಿಕಾಮ್ ಪ್ರಪಂಚಕ್ಕೆ ಕಾಲಿಟ್ಟ ರಿಲಯನ್ಸ್ ಜಿಯೋ, ಮಾರುಕಟ್ಟೆಯ ಎಲ್ಲಾ ಆಪರೇಟರ್ ಗಳನ್ನ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿತು. ಅಂದಿನಿಂದಲು ಇಂದಿನವರೆಗೆ ವೋಡಾಫೋನ್ – ಐಡಿಯಾ ಆರ್ಥಿಕವಾಗಿ ಹಿಂದುಳಿಯಿತು. ಪ್ರತ್ಯೇಕ ಆಪರೇಟರ್ ಗಳಾಗಿದ್ದ ವೋಡಾಫೋನ್ ಐಡಿಯಾ, ಮರ್ಜ್ ಆದಮೇಲೂ ಮಾರುಕಟ್ಟೆಯಲ್ಲಿ ನಷ್ಟವನ್ನ ಅನುಭವಿಸುತ್ತಿರುವುದರಿಂದ ಈ ನಿರ್ಧಾರಕ್ಕೆ ಬಂದಿದೆ‌.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...