ಮನೆಯ ಮುಖ್ಯ ದ್ವಾರದ ಮುಂದೆ ಅಥವಾ ಮನೆ ಗೇಟ್ ಬಳಿ ಇರುವ ಕೆಲವೊಂದು ವಸ್ತುಗಳು ಲಾಭಕ್ಕಿಂತ ಹಾನಿಯುಂಟು ಮಾಡುತ್ತವೆ. ಕುಟುಂಬಸ್ಥರ ಮನಸ್ಸಿನಲ್ಲಿ ಅಸಮಾಧಾನ ಮೂಡುತ್ತದೆ. ಮನೆ ಖರೀದಿ ವೇಳೆ ಅಥವಾ ಮನೆ ನಿರ್ಮಾಣದ ವೇಳೆ ಕೆಲವೊಂದು ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಂದೆ ಧಾರ್ಮಿಕ ಸ್ಥಳ ಅಥವಾ ದೇವಸ್ಥಾನವಿರಬಾರದು. ಇದು ಮನೆಯಲ್ಲಿರುವ ದೇವರಿಗೆ ಶುಭವಾಗುವುದಿಲ್ಲ.
ಮನೆಯ ಮುಂದೆ ಕಸ ಎಸೆಯುವ ಸ್ಥಳವಿರಬಾರದು. ಹಾಗೆ ಮನೆ ಮುಂದೆ ಕಸದ ಬುಟ್ಟಿಯನ್ನು ಇಡಬೇಡಿ. ಕಸದ ಬುಟ್ಟಿ ನಕಾರಾತ್ಮಕ ಶಕ್ತಿ ಪ್ರವೇಶಕ್ಕೆ ಕಾರಣವಾಗುತ್ತದೆ.
ಮನೆ ಮುಂದೆ ಕೊಳಕು ಹರಿಯದಂತೆ ನೋಡಿಕೊಳ್ಳಿ. ಮನೆ ಮುಂದಿರುವ ಕೊಳಕು, ಚರಂಡಿ ನೀರು, ಕುಟುಂಬದಲ್ಲಿ ಆರ್ಥಿಕ ಸಮಸ್ಯೆ ಎದುರಾಗಲು ಕಾರಣವಾಗುತ್ತದೆ. ಮನೆಯಲ್ಲಿ ಉದಾಸೀನತೆಯಿರುತ್ತದೆ.
ಮನೆಯ ಮುಂದೆ ಗಿಡ, ಮರ ಬೆಳೆಸುವುದು ಸಾಮಾನ್ಯ ಸಂಗತಿ. ಆದ್ರೆ ಕೆಲವೊಂದು ಮರಗಳು ನಕಾರಾತ್ಮಕ ಶಕ್ತಿ ಹೆಚ್ಚಿಸುತ್ತದೆ. ಮನೆ ಮುಂದೆ ಹುಣಸೇಹಣ್ಣು, ಆಲದ ಮರ, ನೆಲ್ಲಿಕಾಯಿ ಗಿಡ, ನಿಂಬೆ, ಬಾಳೆ, ದಾಳಿಂಬೆ ಇತ್ಯಾದಿ ಗಿಡ ಅಮಂಗಳಕರ. ಇದು ಆಸ್ತಿ ಮತ್ತು ಸಂತಾನದ ಮೇಲೆ ಪ್ರಭಾವ ಬೀರುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಮನೆ ಮುಂದೆ ವಿದ್ಯುತ್ ಕಂಬ, ಸೂರ್ಯನ ಪ್ರಕಾಶ ಮನೆ ಪ್ರವೇಶ ಮಾಡದಂತಹ ದೊಡ್ಡ ಮರವಿರದಂತೆ ನೋಡಿಕೊಳ್ಳಿ.