ಜೀವನದಲ್ಲಿ ಕಷ್ಟ-ಸುಖ ಸಾಮಾನ್ಯ. ಸುಂದರ ಜೀವನದಲ್ಲಿ ರತ್ನಗಳು ಮಹತ್ವದ ಪ್ರಭಾವ ಬೀರುತ್ತವೆ. ರತ್ನ ಧರಿಸಿದ ತಕ್ಷಣ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ನಂತ್ರ ದೇಹದ ಮೇಲೆ ಪ್ರಭಾವ ಬೀರುತ್ತವೆ.
ಇದಾದ ನಂತ್ರ ನಮ್ಮ ಕೆಲಸದ ಮೇಲೆ ಅದ್ರ ಪರಿಣಾಮ ಕಾಣಿಸಿಕೊಳ್ಳುತ್ತದೆ. ರತ್ನದ ನಷ್ಟ ಬೇಗ ಕಾಣಿಸಿಕೊಳ್ಳುತ್ತದೆ. ರತ್ನದ ಲಾಭ ತಡವಾಗಿ ಕಾಣಿಸುತ್ತದೆ.
ರತ್ನ ಧರಿಸುವ ಮೊದಲು, ಯಾರ ರಾಶಿಗೆ ಹಾಗೂ ಯಾವ ನಕ್ಷತ್ರಕ್ಕೆ ಯಾವ ರತ್ನ ಸೂಕ್ತ ಎಂಬುದನ್ನು ತಿಳಿದಿರಬೇಕಾಗುತ್ತದೆ. ಒಂದೊಂದು ಸಮಸ್ಯೆಗೆ ಒಂದೊಂದು ರತ್ನ ಬಳಸಬೇಕಾಗುತ್ತದೆ. ಸೂರ್ಯನಿಗೆ ಸಂಬಂಧಿಸಿದ ಸಮಸ್ಯೆ ಪರಿಹಾರಕ್ಕೆ ಮಾಣಿಕ್ಯವನ್ನು ಬಳಸಬೇಕು.
ಕನ್ಯಾ, ತುಲಾ, ಮಕರ ಮತ್ತು ಕುಂಭ ರಾಶಿಯವರು ಎಂದೂ ಮಾಣಿಕ್ಯವನ್ನು ಧರಿಸಬಾರದು. ಮಾಣಿಕ್ಯ ತಲೆನೋವು, ಮೂಳೆಗಳ ನೋವಿನ ಮೂಲಕ ನಕಾರಾತ್ಮಕ ಪ್ರಭಾವ ಶುರು ಮಾಡುತ್ತದೆ.
ಮಾನಸಿಕ ಹಾಗೂ ಉಸಿರಾಟದ ಸಮಸ್ಯೆಗೆ ರತ್ನ ಬಹುಮುಖ್ಯ ಪಾತ್ರ ವಹಿಸುತ್ತದೆ. ವೃಷಭ, ಮಿಥುನ, ಕನ್ಯಾ ರಾಶಿಯವರ ಮೇಲೆ ಭಯಂಕರ ಪರಿಣಾಮ ಬೀರುವ ಸಾಧ್ಯತೆಯಿದೆ. ರತ್ನ ಮಾನಸಿಕ ಸ್ಥಿತಿ ಮೇಲೆ ಪ್ರಭಾವ ಬೀರುತ್ತದೆ.
ಪಚ್ಚೆ ಮನಸ್ಸು ಹಾಗೂ ಬುದ್ಧಿಯನ್ನು ಬಲಪಡಿಸುತ್ತದೆ. ಮೇಷ, ಕರ್ಕ, ವೃಶ್ಚಿಕ ರಾಶಿಯವರು ಇದನ್ನು ಧರಿಸಬಾರದು.