
ದಂಪತಿಗಳ ಮಧ್ಯೆ ಅನ್ಯೋನ್ಯತೆ ಇರಬೇಕು ಎಂಬುದೇನೋ ನಿಜ. ಆದರೆ ಅದು ಹೇಗೆ ಮತ್ತು ಯಾವ ರೀತಿ ಎಂಬುದು ತಿಳಿದುಕೊಳ್ಳದ ಹೊರತು ಬಾಳು ಬಂಗಾರವಾಗಲು ಸಾಧ್ಯವಿಲ್ಲ.
ದೈಹಿಕ ಸಂಬಂಧದ ಹೊರತಾಗಿಯೂ ಒಬ್ಬರನ್ನೊಬ್ಬರು ಅರಿತುಕೊಳ್ಳುವುದು, ಇನ್ನೊಬ್ಬರ ಭಾವನೆಗಳಿಗೆ ಬೆಲೆ ಕೊಡುವುದು ಬಹಳ ಮುಖ್ಯವಾಗುತ್ತದೆ. ಸಂಗಾತಿಯ ಸಣ್ಣ ಸಣ್ಣ ಸಂಗತಿಗಳಿಗೂ ಮಹತ್ವ ನೀಡಿ ಅವರನ್ನು ಆದರಿಸುವುದರಿಂದ ಭಾವನಾತ್ಮಕ ಸಂಬಂಧ ಗಟ್ಟಿಯಾಗುತ್ತದೆ.
ಯಾರೂ ಪರಿಪೂರ್ಣರಲ್ಲ ಎಂಬುದನ್ನು ಮೊದಲು ಅರಿತುಕೊಳ್ಳಿ. ಎಲ್ಲರಿಗೂ ಅವರದ್ದೇ ವ್ಯಾಪ್ತಿಯಲ್ಲಿ ಸಾಮರ್ಥ್ಯ ಮತ್ತು ಮಿತಿಗಳು ಇರುತ್ತವೆ. ಸಂಗಾತಿಯ ಮಿತಿಗಳನ್ನು ಅರಿತುಕೊಳ್ಳಿ. ನಿಮ್ಮ ಸಾಮರ್ಥ್ಯವನ್ನು ಅವರಿಗೆ ಪರಿಚಯಿಸಿ.
ಯಾವ ಕೊರತೆಯನ್ನೂ ಅಪರಾಧ ಎಂದುಕೊಳ್ಳದಿರಿ. ಇನ್ನೊಬ್ಬರೊಂದಿಗೆ ಹೋಲಿಸಿ ಬದುಕದಿರಿ. ಪ್ರೀತಿ ವಾತ್ಸಲ್ಯವನ್ನು ಅವರೊಂದಿಗೆ ಹಂಚಿಕೊಳ್ಳಿ. ಇದರಿಂದ ನೀವಿಬ್ಬರೂ ಭಾವನಾತ್ಮಕವಾಗಿ ಹತ್ತಿರವಾಗಿ. ಇಲ್ಲಿಗೆ ಬದುಕು ಸುಂದರವಾಗುವುದು ನಿಶ್ಚಿತ.