ಭಾರತದಲ್ಲಿ ನವೆಂಬರ್ 8ರಂದು ಈ ವರ್ಷದ ಕೊನೆಯ ಚಂದ್ರ ಗ್ರಹಣ ಸಂಭವಿಸಲಿದೆ. ಇದು ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ. ಈ ಬಾರಿ ಪೂರ್ಣ ಚಂದ್ರಗ್ರಹಣವಿದೆ. 2025ರವರೆಗೂ ಈ ರೀತಿಯ ಪೂರ್ಣ ಚಂದ್ರಗ್ರಹಣವಿಲ್ಲ. ಭಾರತದಲ್ಲಿ ದೇಶದ ಪೂರ್ವ ಭಾಗದಲ್ಲಿ ಮಾತ್ರ ಅಂದರೆ ಕೋಲ್ಕತ್ತಾ, ಭುವನೇಶ್ವರ್, ಪಾಟ್ನಾ, ಗುವಾಹಟಿ, ಕೊಹಿಮಾ, ಐಜ್ವಾಲ್ ಮತ್ತು ಇಂಫಾಲ್‌ನಲ್ಲಿ ಮಾತ್ರ ಚಂದ್ರಗ್ರಹಣ ಗೋಚರವಾಗಲಿದೆ.
ಚಂದ್ರಗ್ರಹಣವು ಕಾರ್ತಿಕ ಪೂರ್ಣಿಮಾದಂದೇ ಬಂದಿದೆ. ದಿನಾಂಕ ಮತ್ತು ಸಮಯವನ್ನು ನಿಖರವಾಗಿ ನೋಡುವುದಾದರೆ ಸೂರ್ಯಗ್ರಹಣದ ಬಳಿಕ ನಿಖರವಾಗಿ 15 ದಿನಗಳ ನಂತರ ಚಂದ್ರಗ್ರಹಣ ಸಂಭವಿಸುತ್ತಿದೆ.
ಚಂದ್ರ ಗ್ರಹಣ 2022: ದಿನಾಂಕ ಮತ್ತು ಸಮಯ ಭಾರತದಲ್ಲಿ ಹಿಂದೂ ಕ್ಯಾಲೆಂಡರ್ ಪ್ರಕಾರ ವರ್ಷದ ಕೊನೆಯ ಚಂದ್ರಗ್ರಹಣ ನವೆಂಬರ್ 8 ರಂದು ಸಂಜೆ ಸಂಜೆ 5:32 ರಿಂದ ಪ್ರಾರಂಭವಾಗುತ್ತದೆ ಮತ್ತು 6:18ಕ್ಕೆ ಕೊನೆಗೊಳ್ಳುತ್ತದೆ. ಗ್ರಹಣ ಪ್ರಾರಂಭವಾಗುವ 9 ಗಂಟೆಗಳ ಮೊದಲು ಅಂದರೆ ಬೆಳಿಗ್ಗೆ 9:30ಕ್ಕೆ ಸೂತಕ ಕಾಲ ಪ್ರಾರಂಭವಾಗುತ್ತದೆ ಮತ್ತು ಸಂಜೆ 6:18 ಕ್ಕೆ ಚಂದ್ರಗ್ರಹಣದೊಂದಿಗೆ ಕೊನೆಗೊಳ್ಳುತ್ತದೆ.
ಸೂರ್ಯಗ್ರಹಣದಂತೆ ಯಾವುದೇ ವಿಶೇಷ ಉಪಕರಣಗಳಿಲ್ಲದೆ ಚಂದ್ರಗ್ರಹಣವನ್ನು ವೀಕ್ಷಿಸಬಹುದು. ಚಂದ್ರನು ಸೂರ್ಯನ ಬೆಳಕನ್ನು ಪ್ರತಿಬಿಂಬಿಸುವುದರಿಂದ, ಬೆಳಕು ಮಾನವನ ಕಣ್ಣುಗಳಿಗೆ ಹಾನಿ ಮಾಡುವುದಿಲ್ಲ. ಆಕಾಶವು ಸಂಪೂರ್ಣವಾಗಿ ಶುಭ್ರವಾಗಿದ್ದರೆ ನೀವು ಬರಿಗಣ್ಣಿನಿಂದ ಚಂದ್ರಗ್ರಹಣವನ್ನು ನೋಡಲು ಸಾಧ್ಯವಾಗುತ್ತದೆ.
ಚಂದ್ರಗ್ರಹಣದಲ್ಲಿ ಏನೇನು ಮಾಡಬಹುದು?
– ತುಳಸಿ ಎಲೆಗಳನ್ನು ಆಹಾರ ಮತ್ತು ಹಾಲು ಮುಂತಾದ ಹಾಳಾಗುವ ವಸ್ತುಗಳಲ್ಲಿ ಹಾಕಿಡಿ.
– ಗ್ರಹಣದ ಮೊದಲು ಮತ್ತು ನಂತರ ಸ್ನಾನ ಮಾಡಬೇಕು. ಹೀಗೆ ಮಾಡುವುದರಿಂದ ಗ್ರಹಣದ ದುಷ್ಪರಿಣಾಮವಿಲ್ಲ ಎಂದು ಹೇಳಲಾಗುತ್ತದೆ.
– ಗ್ರಹಣ ಕಾಲದಲ್ಲಿ ಮಾಡುವ ಪೂಜೆ ಲಕ್ಷಾಂತರ ಪಟ್ಟು ಫಲ ನೀಡುತ್ತದೆ. ಗ್ರಹಣ ಕಾಲದಲ್ಲಿ ಮಂತ್ರ ಪಠಣ ಮತ್ತು ಧ್ಯಾನವನ್ನು ಮಾಡಿ.
– ನೀವು ಪೂರ್ವಜರ ಹೆಸರಿನಲ್ಲಿ ದಕ್ಷಿಣೆಯ ಜೊತೆಗೆ ದಾನ ಮಾಡಬಹುದು. ಗ್ರಹಣ ಅವಧಿಯ ನಂತರ ದಾನ ಮಾಡಬೇಕು.
ಚಂದ್ರಗ್ರಹಣದಲ್ಲಿ ಏನೇನು ಮಾಡಬಾರದು?
– ಗ್ರಹಣ ಅವಧಿಯಲ್ಲಿ ಗರ್ಭಿಣಿಯರು, ಮಕ್ಕಳು ಮತ್ತು ವಯಸ್ಸಾದವರನ್ನು ಹೊರತುಪಡಿಸಿ ಉಳಿದವರು ಯಾವುದೇ ಆಹಾರ ಅಥವಾ ಪಾನೀಯವನ್ನು ಸೇವಿಸಬಾರದು.
– ಗ್ರಹಣ ಕಾಲದಲ್ಲಿ ಮಾಡಿದ ಅಡುಗೆಯನ್ನು ಸೇವಿಸಬೇಡಿ. ಹಣ್ಣುಗಳನ್ನು ಕತ್ತರಿಸಿ ಇಡಬೇಡಿ. ಅದು ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.
– ಸೂತಕದ ಅವಧಿಯಲ್ಲಿ ಏನನ್ನೂ ತಿನ್ನುವುದು ಮತ್ತು ಕುಡಿಯುವುದನ್ನು ತಪ್ಪಿಸಿ. ಗ್ರಹಣಕ್ಕೆ ಮೊದಲು ಮಾಡಿದ ಆಹಾರ ಉಳಿದಿದ್ದರೆ ಅದನ್ನು ಮತ್ತೆ ಸೇವಿಸಬೇಡಿ. ಗ್ರಹಣ ಮುಗಿದ ನಂತರ ಫ್ರೆಶ್ ಆಗಿ ತಯಾರಿಸಿಕೊಂಡು ಸೇವನೆ ಮಾಡಿ.
ಚಂದ್ರಗ್ರಹಣದ ರಾಶಿಫಲ…
ಈ ಚಂದ್ರಗ್ರಹಣವು ವಿಭಿನ್ನ ರಾಶಿಯವರಿಗೆ ಬೇರೆ ಬೇರೆ ತೆರನಾದ ಫಲಗಳನ್ನು ಹೊತ್ತು ತರುತ್ತಿದೆ. ಮುಖ್ಯವಾಗಿ 4 ರಾಶಿಚಕ್ರದ ಚಿಹ್ನೆಗಳ ಮೇಲೆ ಇದು ಹೆಚ್ಚು ಪರಿಣಾಮ ಬೀರುತ್ತದೆ. ಈ ರಾಶಿಯವರು ಮಾನಸಿಕ ಒತ್ತಡ, ಉದ್ವೇಗ ಮತ್ತು ಸಂಬಂಧದಲ್ಲಿ ಯಾವುದೇ ಹಣಕಾಸಿನ ನಷ್ಟವನ್ನು ಎದುರಿಸಬೇಕಾಗಬಹುದು. ಅದಕ್ಕಾಗಿಯೇ ನೀವು ಚಂದ್ರಗ್ರಹಣದ ಸಮಯದಲ್ಲಿ ದಾನ ಮಾಡಬೇಕು.
ವೃಷಭ ರಾಶಿ: ಈ ಚಂದ್ರಗ್ರಹಣವು ಎಲ್ಲಾ ವೃಷಭ ರಾಶಿಯವರಿಗೆ ಶುಭವಲ್ಲ. ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಅಲ್ಲದೆ, ಗ್ರಹಣದ ಸಮಯದಲ್ಲಿ, ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವುದನ್ನು ತಪ್ಪಿಸಿ.
ಮಿಥುನ ರಾಶಿ: ವರ್ಷದ ಕೊನೆಯ ಚಂದ್ರಗ್ರಹಣವೂ ಮಿಥುನ ರಾಶಿಯವರ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಈ ಸಮಯದಲ್ಲಿ ನಿಮ್ಮ ವೆಚ್ಚಗಳು ಗಮನಾರ್ಹವಾಗಿ ಹೆಚ್ಚಾಗಬಹುದು. ಇದರೊಂದಿಗೆ ಮಾನಸಿಕ ಒತ್ತಡದ ಸ್ಥಿತಿಯೂ ಬರಬಹುದು.
ಕನ್ಯಾರಾಶಿ: ಚಂದ್ರಗ್ರಹಣದ ನಂತರ ಕನ್ಯಾ ರಾಶಿಯವರು ಮುಂದಿನ 15 ದಿನಗಳ ಕಾಲ ಎಚ್ಚರಿಕೆ ವಹಿಸಬೇಕು. ಯಾವುದೇ ರೀತಿಯ ಅನಗತ್ಯ ವೆಚ್ಚಗಳಿಂದ ದೂರವಿರಿ. ಇಲ್ಲದಿದ್ದರೆ ಆರ್ಥಿಕ ನಷ್ಟವಾಗಬಹುದು.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯ ಉಪ ರಾಶಿಯವರು ಈ ಗ್ರಹಣದ ಸಮಯದಲ್ಲಿ ಜಾಗರೂಕರಾಗಿರಬೇಕು. ಹಣಕ್ಕೆ ಸಂಬಂಧಿಸಿದ ಯಾವುದೇ ಕೆಲಸವನ್ನು ಪ್ರಾರಂಭಿಸುವ ಅಥವಾ ಮಾಡುವ ಮೊದಲು ಬಹಳಷ್ಟು ಯೋಚಿಸಿ. ಇಲ್ಲದಿದ್ದರೆ ನೀವು ದೊಡ್ಡ ಆರ್ಥಿಕ ನಷ್ಟವನ್ನು ಅನುಭವಿಸಬಹುದು.
ಧಾರ್ಮಿಕ ಸಂಸ್ಕೃತಿಯ ಪ್ರಕಾರ, ಚಂದ್ರ ಅಥವಾ ಸೂರ್ಯಗ್ರಹಣದ ಸಮಯದಲ್ಲಿ ಸೂತಕ ಕಾಲವು ದುರದೃಷ್ಟಕರವಾಗಿದೆ. ಈ ಸಮಯದಲ್ಲಿ ಯಾವುದೇ ಹೊಸ ಯೋಜನೆಗಳನ್ನು ಪ್ರಾರಂಭಿಸದಂತೆ ಅಥವಾ ಯಾವುದೇ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಜನರಿಗೆ ಸಲಹೆ ನೀಡಲಾಗುತ್ತದೆ ಮತ್ತು ಗ್ರಹಣದ ಉದ್ದಕ್ಕೂ ಮನೆಯೊಳಗೆ ಇರುವುದು ಉತ್ತಮವೆಂದು ಜ್ಯೋತಿಷಿಗಳು ಹೇಳುತ್ತಾರೆ.