alex Certify ನವವಿವಾಹಿತರಿಗೆ ಸ್ನೇಹಿತರಿಂದ ಪೆಟ್ರೋಲ್​ – ಡೀಸೆಲ್​​​ ಉಡುಗೊರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನವವಿವಾಹಿತರಿಗೆ ಸ್ನೇಹಿತರಿಂದ ಪೆಟ್ರೋಲ್​ – ಡೀಸೆಲ್​​​ ಉಡುಗೊರೆ

ಇಂಧನಗಳ ದರ ಏರಿಕೆಯಾಗುತ್ತಿರುವ ಬೆನ್ನಲ್ಲೇ ನವ ವಿವಾಹಿತರಿಗೆ ಸ್ನೇಹಿತರು ಉಡುಗೊರೆ ರೂಪದಲ್ಲಿ ಪೆಟ್ರೋಲ್​ ಹಾಗೂ ಡೀಸೆಲ್​ ನೀಡಿದ ಘಟನೆಯು ತಮಿಳುನಾಡಿನ ಚೆಯ್ಯೂರ್​​​ ಎಂಬಲ್ಲಿ ನಡೆದಿದೆ.

ತಮಿಳುನಾಡಿನಲ್ಲಿ ಕಳೆದ 15 ದಿನಗಳಲ್ಲಿ ಪೆಟ್ರೋಲ್​ ಹಾಗೂ ಡೀಸೆಲ್​​ ಬೆಲೆಯು ಪ್ರತಿ ಲೀಟರ್​​ಗೆ 9 ರೂಪಾಯಿಗೂ ಹೆಚ್ಚಿನ ಏರಿಕೆ ಕಂಡಿದೆ. ತಮಿಳುನಾಡಿನಲ್ಲಿ ಪೆಟ್ರೋಲ್​ ಬೆಲೆ ಪ್ರತಿ ಲೀಟರ್​ಗೆ 110.85 ರೂಪಾಯಿ ಆಗಿದೆ. ಡೀಸೆಲ್​ ದರ ಪ್ರತಿ ಲೀಟರ್​ಗೆ 100.94 ರೂಪಾಯಿ ಆಗಿದೆ.

ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ಲಾನ್​ ಮಾಡಿದ ಸ್ನೇಹಿತರು ಗ್ರೇಸ್​ ಕುಮಾರ್​ ಹಾಗೂ ಕೀರ್ತನಾ ಮದುವೆಗೆ ಪೆಟ್ರೋಲ್​ ಹಾಗೂ ಡೀಸೆಲ್​ ಉಡುಗೊರೆಯಾಗಿ ನೀಡಿದ್ದಾರೆ. ಮೊದಲು ಸ್ನೇಹಿತರ ಗಿಫ್ಟ್​ ಕಂಡು ಶಾಕ್​​ ಆದ ನವಜೋಡಿ ಬಳಿಕ ನಗು ನಗುತ್ತಲೇ ಗಿಫ್ಟ್​​ನ್ನು ಸ್ವೀಕರಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...