ನವರಾತ್ರಿ 5ನೇ ದಿನದಂದು ದೇವಿಯನ್ನು ಸ್ಕಂದ ಮಾತೆ ಸ್ವರೂಪದಲ್ಲಿ ಪೂಜಿಸಲಾಗುತ್ತದೆ. ಈ ಅವತಾರದಲ್ಲಿ ದೇವಿಯು ನಾಲ್ಕು ಕೈಗಳನ್ನು ಹೊಂದಿದ್ದು ಎರಡು ಕೈಯಲ್ಲಿ ಕಮಲದ ಹೂ, ಹಾಗೇ ಎಡ ಕೈಯಲ್ಲಿ ಆಭಯಮುದ್ರೆ, ಬಲ ಕೈಯಲ್ಲಿ ತೊಡೆಮೇಲೆ ಕುಳಿತ ಸ್ಕಂದ ಪುತ್ರನನ್ನು ಹಿಡಿದಿರುತ್ತಾಳೆ. ಸ್ಕಂದ ಮಾತೆಯನ್ನು ಆರಾಧಿಸಿದರೆ ಸಕಲ ಇಷ್ಟಾರ್ಥಗಳು ಪೂರ್ಣವಾಗುವುದರ ಜತೆಗೆ ಮನಸ್ಸು ಕೂಡ ಸ್ಥಿರವಾಗಿರುತ್ತದೆ.
ಶಿವ-ಪಾರ್ವತಿಯ ಮಗನಾದ ಕಾರ್ತಿಕೇಯನ ಇನ್ನೊಂದು ಹೆಸರು ಸ್ಕಂದ. ಸ್ಕಂದನನ್ನು ತೊಡೆಯ ಮೇಲೆ ಕೂರಿಸಿಕೊಂಡಿರುವುದಕ್ಕೆ ತಾಯಿಗೆ ಸ್ಕಂದ ಮಾತೆ ಎಂಬ ಹೆಸರು ಬಂದಿದೆ. ಸ್ಕಂದ ಮಾತೆಗೆ ಹಳದಿ ಹಾಗೂ ಬಿಳಿಬಣ್ಣದ ಹೂಗಳನ್ನು ಅರ್ಪಿಸಿದರೆ ದೇವಿಯ ಅನುಗ್ರಹ ಸಿಗುತ್ತದೆ.
ಹಾಗೇ ಇಂದು ಶಾರದಾ ಪೂಜೆ ಕೂಡ ಆರಂಭವಾದ್ದರಿಂದ ಸರಸ್ವತಿ ದೇವಿಯ ಫೋಟೊ ಅಥವಾ ಪುಸ್ತಕವನ್ನು ಇಟ್ಟು ಮನೆಯಲ್ಲಿ ಪೂಜೆ ಮಾಡಿದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಹಾಗೇ ದೇವಿಗೆ ಬಾಳೆಹಣ್ಣನ್ನು ಈ ದಿನ ನೈವೇದ್ಯವಾಗಿ ಇಟ್ಟು ಪೂಜಿಸಿದರೆ ಒಳಿತಾಗುವುದು.