ದುರ್ಗೆ ಪೂಜೆ ಜೊತೆಗೆ ರುಚಿ ರುಚಿ ಅಡುಗೆ ಸಿದ್ಧವಾಗ್ತಿರುತ್ತೆ. ಈ ಶುಭದಿನದಂದು ಕೊಬ್ಬರಿ ಹಲ್ವಾ ಮಾಡಿ ಹಬ್ಬದೂಟ ಮಾಡಿ. ಕೊಬ್ಬರಿ ಹಲ್ವ ಮಾಡುವುದು ಬಹಳ ಸರಳ.
ಕೊಬ್ಬರಿ ಹಲ್ವಾ ಮಾಡಲು ಬೇಕಾಗುವ ಪದಾರ್ಥ :
1 ಕಪ್ ತುರಿದ ಕೊಬ್ಬರಿ
1 ಕಪ್ ಸಕ್ಕರೆ
½ ಕಪ್ ನೀರು
ಸ್ವಲ್ಪ ಏಲಕ್ಕಿ ಪುಡಿ
ಮೊಟ್ಟೆ ಜೊತೆ ಈ ಆಹಾರದ ಸೇವನೆ ಬೇಡ
ಕೊಬ್ಬರಿ ಹಲ್ವಾ ಮಾಡುವ ವಿಧಾನ : ಕೊಬ್ಬರಿಯನ್ನು ಸಣ್ಣದಾಗಿ ಕಟ್ ಮಾಡಿಕೊಂಡು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಒಂದು ಬಾಣಲೆಗೆ ನೀರು, ಸಕ್ಕರೆ ಹಾಕಿ ಪಾಕ ತರಿಸಿಕೊಳ್ಳಿ. ಗಟ್ಟಿ ಪಾಕ ಬಂದ ಮೇಲೆ ಏಲಕ್ಕಿ ಪುಡಿ ಹಾಗೂ ಕೊಬ್ಬರಿಯನ್ನು ಸೇರಿಸಿ. ಅದು ತಳಬಿಡಲು ಶುರುಮಾಡುತ್ತದೆ. ತಕ್ಷಣ ಪ್ಲೇಟ್ ಗೆ ತುಪ್ಪ ಸವರಿ ಪ್ಲೇಟ್ ಮೇಲೆ ಸವರಿ. ತಣ್ಣಗಾದ ಮೇಲೆ ಕಟ್ ಮಾಡಿ.