ಬಾಣಲೆಯಲ್ಲಿದ್ದ ಆಲೂಗಡ್ಡೆ ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆ ಹೆಚ್ಚುವರಿ ತುಪ್ಪ ಅದರಿಂದ ಬೇರ್ಪಡುತ್ತದೆ. ಆಗ ಒಂದು ಬಾರಿ ಉರಿಯನ್ನ ಆರಿಸಿ ಜರಡಿಯ ಸಹಾಯದಿಂದ ಸಿದ್ಧಗೊಂಡ ಆಲೂಗಡ್ಡೆಯನ್ನ ಸೋಸಿ, ಹೆಚ್ಚುವರಿ ತುಪ್ಪವನ್ನ ತೆಗೆಯಬೇಕು.
ತುಪ್ಪ ಬೇರ್ಪಟ್ಟ ಆಲೂ ಮಿಶ್ರಣವನ್ನ ಮತ್ತೆ ಬಾಣಲೆಗೆ ಹಾಕಿ ಸಕ್ಕರೆಯನ್ನ ಸೇರಿಸಿ ಮತ್ತೆ ಹುರಿಯಿರಿ. ಇಡೀ ಸಕ್ಕರೆಯನ್ನ ಹಾಕುವುದಕ್ಕಿಂದ ಸಕ್ಕರೆ ಪುಡಿ ಮಾಡಿ ಹಾಕಿದರೆ ಬೇಗ ಕರಗುತ್ತದೆ. ಫ್ರೈ ಆದ ಆಲೂಗಡ್ಡೆಯೊಂದಿಗೆ ಸಕ್ಕರೆಯೂ ಕರಗಿ ಹದ ಬಂದಮೇಲೆ ಉರಿಯನ್ನ ಆರಿಸಿ. ಈಗ ರುಚಿ ರುಚಿ ಆಲೂಗಡ್ಡೆ ಹಲ್ವಾ ಸವಿಯಲು ಸಿದ್ಧ.
ದಿಢೀರ್ ಮಾಡಬಹುದಾದ ಈ ಆಲೂಗಡ್ಡೆ ಹಲ್ವಾವನ್ನ ಅನಿರೀಕ್ಷಿತ ಅತಿಥಿಗಳು ಮನೆಗೆ ಬಂದಾಗ ಮಾಡಬಹುದು. ಪಶ್ಚಿಮ ಬಂಗಾಳದಲ್ಲಿ ಈ ಹಲ್ವಾವನ್ನ ನವರಾತ್ರಿ ಹಬ್ಬದಂದು ಮಾಡಿ ದುರ್ಗೆಗೆ ನೈವೇದ್ಯ ಮಾಡುತ್ತಾರೆ. ದುರ್ಗೆ ನೈವೇದ್ಯಕ್ಕೆ ಆಲೂಗಡ್ಡೆಯ ಖಾದ್ಯ ಶ್ರೇಷ್ಠ ಎಂಬ ನಂಬಿಕೆ ಪಶ್ಚಿಮ ಬಂಗಾಳದಲ್ಲಿದೆ.