ನವರಾತ್ರಿಯ ವೇಳೆ ವ್ರತ, ಪೂಜೆಯ ಮೂಲಕ ದೇವಿಯ ಆರಾಧನೆ ಮಾಡುತ್ತಾರೆ. ದೇವಿಯ ಅನುಗ್ರಹ ಪಡೆಯಲು ಭಕ್ತಿಯಿಂದ ಪೂಜಿಸುತ್ತಾರೆ. ಆದ ಕಾರಣ ನಿಮ್ಮ ಪೂಜೆ ದೇವಿಗೆ ಸಲ್ಲಿಕೆಯಾಗಿ, ಆಕೆಯ ಅನುಗ್ರಹ ನಿಮ್ಮ ಮೇಲಾಗಿದೆಯೇ? ಎಂಬುದನ್ನು ಈ ಸೂಚನೆಗಳ ಮೂಲಕ ತಿಳಿದುಕೊಳ್ಳಬಹುದು.
ನವರಾತ್ರಿಯ ಈ ವೇಳೆ ನಿಮ್ಮ ಕನಸಿನಲ್ಲಿ ಗೂಬೆ ಕಾಣಿಸಿಕೊಂಡರೆ ನಿಮಗೆ ಲಕ್ಷ್ಮೀ ದೇವಿಯ ಅನುಗ್ರಹವಾಗಿದೆ ಎಂದರ್ಥ. ನಿಮ್ಮ ವ್ರತಕ್ಕೆ ಸಂಪೂರ್ಣ ಫಲ ಸಿಗುತ್ತದೆ ಎಂದು ಹೇಳಲಾಗುತ್ತದೆ.
ಹಾಗೇ ಬೆಳಿಗ್ಗೆ ನೀವು ಎದ್ದೇಳುವಾಗ ಕಮಲದ ಹೂ ಅಥವಾ ತೆಂಗಿನಕಾಯಿ ಕಣ್ಣಿಗೆ ಕಾಣಿಸಿಕೊಂಡರೆ ಅದರಿಂದ ನಿಮಗೆ ಅದೃಷ್ಟ ಒಲಿದು ಬರುತ್ತದೆ ಎಂದರ್ಥ.
ಅಲ್ಲದೇ ನೀವು ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಹಸು ಕಾಣಿಸಿಕೊಂಡರೆ ನಿಮ್ಮ ಮೇಲೆ ಮುಕ್ಕೋಟಿ ದೇವರ ಆಶೀರ್ವಾದ ಇದೆ ಎಂದರ್ಥ. ನಿಮ್ಮ ಕನಸಿನಲ್ಲಿ ಶಂಖ, ಹಾವು ಕಾಣಿಸಿಕೊಂಡರೆ ದೇವಿಯ ಕೃಪೆ ನಿಮ್ಮ ಮೇಲಿದೆ ಎಂಬುದನ್ನು ಇದು ಸೂಚಿಸುತ್ತದೆ.