ನವರಾತ್ರಿಯಲ್ಲಿ ದುರ್ಗೆಯ ಆರಾಧನೆ ನಡೆಯುತ್ತದೆ. ದುರ್ಗೆಯ ಪೂಜೆ, ಆರಾಧನೆ ಜೊತೆ ದುರ್ಗಾ ಸಪ್ತಶತಿ ಮಂತ್ರವನ್ನು ಪಠಿಸಬೇಕು. ಮಾರ್ಕಂಡೇಯ ಪುರಾಣದ 13 ನೇ ಅಧ್ಯಯನದಲ್ಲಿ ಇದ್ರ ಬಗ್ಗೆ ಬರೆಯಲಾಗಿದೆ.
ಇದ್ರ ಪ್ರತಿಯೊಂದು ಶ್ಲೋಕಕ್ಕೂ ಒಂದೊಂದು ಮಹತ್ವವಿದೆ. ಈ ಮಂತ್ರ ಪಠಣದಿಂದ ಎಲ್ಲ ಆಸೆಗಳು ಈಡೇರಲಿವೆ ಎಂದು ನಂಬಲಾಗಿದೆ. ನವರಾತ್ರಿಯಲ್ಲಿ ಪ್ರತಿ ದಿನ ಮೂರು ಮಾಲೆಗಳನ್ನು ಮುಗಿಸುವಷ್ಟು ಬಾರಿ ದುರ್ಗಾ ಸಪ್ತಶತಿ ಓದಬೇಕು.
ದೇವಿ ಮತ್ತು ದುಷ್ಟ ಶಕ್ತಿ ನಡುವಿನ ಕಥೆಯನ್ನು ದುರ್ಗಾ ಸಪ್ತಶತಿಯಲ್ಲಿ ಹೇಳಲಾಗಿದೆ. ಮಹಿಷಾಸುರನನ್ನು ದುರ್ಗಾಮಾತೆ ವಧಿಸಿದ್ದಾಳೆ ಎಂಬುದನ್ನು ಇಲ್ಲಿ ಹೇಳಲಾಗಿದೆ. 700 ಮಂತ್ರವನ್ನು ಹೊಂದಿದ್ದು ಇದನ್ನು ತಪ್ಪಿಲ್ಲದೆ ಉಚ್ಛಾರಣೆ ಮಾಡಬೇಕು. ಈ ಮಂತ್ರ ಜಪಿಸುವುದ್ರಿಂದ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.
ಐಶ್ವರ್ಯ ಪ್ರಾಪ್ತಿಗಾಗಿ, ಸಕಲ ಕಲ್ಯಾಣಕ್ಕಾಗಿ, ಸೌಭಾಗ್ಯ ಪ್ರಾಪ್ತಿಗೆ, ಆಸೆ ಈಡೇರಿಕೆಗೆ, ಆರೋಗ್ಯ ವೃದ್ಧಿಗೆ ಹೀಗೆ ಬೇರೆ ಬೇರೆ ವಿಚಾರಕ್ಕೆ ಬೇರೆ ಬೇರೆ ಮಂತ್ರವಿದೆ. ಭಕ್ತರು ನವರಾತ್ರಿ ಸಂದರ್ಭದಲ್ಲಿ ಎಲ್ಲ ಮಂತ್ರವನ್ನೂ ಜಪಿಸಬಹುದು. ಕೆಲವರು ಆಯ್ದ ಮಂತ್ರಗಳನ್ನು ಮಾತ್ರ ಜಪಿಸುತ್ತಾರೆ. ನವರಾತ್ರಿಯ 9 ದಿನ ಈ ಮಂತ್ರ ಜಪಿಸುವುದು ಬಹಳ ಒಳ್ಳೆಯದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.