ಮನೆ ಬದಲಾವಣೆಯಿರಲಿ ಹೊಸ ವ್ಯಾಪಾರವಿರಲಿ ಎಲ್ಲದಕ್ಕೂ ನವರಾತ್ರಿಯ 9 ದಿನಗಳೂ ಒಳ್ಳೆಯದು. ಆದ್ರೆ ನವರಾತ್ರಿಯಲ್ಲಿ ಯಾವುದೇ ಮದುವೆ ಸಮಾರಂಭಗಳು ಮಾತ್ರ ನಡೆಯುವುದಿಲ್ಲ. ಇದಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಕಾರಣಗಳನ್ನು ಹೇಳಲಾಗಿದೆ.
ನವರಾತ್ರಿ ಒಂದು ಪವಿತ್ರ ಹಾಗೂ ಶುದ್ಧ ಹಬ್ಬವಾಗಿದೆ. ದುರ್ಗೆಯ 9 ಅವತಾರಗಳ ಪೂಜೆ ನಡೆಯುತ್ತದೆ. ಶಾರೀರಿಕ ಹಾಗೂ ಮಾನಸಿಕ ಶುದ್ಧತೆಗೆ ವೃತ ಆಚರಿಸಲಾಗುತ್ತದೆ. ನವರಾತ್ರಿಯಂದು ಅನೇಕ ಕೆಲಸಗಳನ್ನು ಮಾಡಬಾರದು. ವೃತ ಆಚರಿಸುವವರು ಕೂದಲು ಕತ್ತರಿಸುವುದ್ರಿಂದ ಹಿಡಿದು ಶಾರೀರಿಕ ಸಂಬಂಧದವರೆಗೆ ವರ್ಜಿತ ಯಾವುದೇ ಕೆಲಸವನ್ನು ಮಾಡುವುದಿಲ್ಲ.
ಮದುವೆ ಎಂಬುದು ವಂಶಾಭಿವೃದ್ಧಿ ಉದ್ದೇಶದಿಂದ ಮಾಡುವಂತಹದ್ದು. ನವರಾತ್ರಿ ಸಂದರ್ಭದಲ್ಲಿ ಶಾರೀರಿಕ ಸಂಬಂಧ ನಿಶಿದ್ಧ. ಮದುವೆಯಾದ್ಮೇಲೆ ಪದ್ಧತಿಯಂತೆ ನವ ದಂಪತಿ ಶಾರೀರಿಕ ಸಂಬಂಧ ಬೆಳೆಸಬೇಕಾಗುತ್ತದೆ. ಆದ್ರೆ ದುರ್ಗೆ ಆರಾಧನೆಯಲ್ಲಿ ಇದು ನಿಶಿದ್ಧವಾದ ಕಾರಣ ಮದುವೆ ಸಮಾರಂಭಗಳನ್ನು ಮಾಡುವುದಿಲ್ಲ. ಹಾಗೆ ನವರಾತ್ರಿಯಲ್ಲಿ ಮದುವೆಯಾಗದ ಕನ್ಯೆಯರಿಗೆ ಹೆಚ್ಚಿನ ಮಹತ್ವವಿದೆ. 10 ವರ್ಷಕ್ಕಿಂತ ಕೆಳಗಿನ ಹೆಣ್ಣು ಮಕ್ಕಳನ್ನು ತಾಯಿಗೆ ಹೋಲಿಕೆ ಮಾಡಲಾಗುತ್ತದೆ.