ನವರಾತ್ರಿಯಲ್ಲಿ ಬಗೆ ಬಗೆಯ ಸಿಹಿ ತಿಂಡಿಗಳನ್ನು ಮಾಡಿ ತಾಯಿಗೆ ನೈವೇದ್ಯ ಮಾಡಲಾಗುತ್ತದೆ. ನವರಾತ್ರಿಯ ದಿನ ಸಬ್ಬಕ್ಕಿ ಟಿಕ್ಕಿ ಚಾಟ್ ಮಾಡಿ ತಿನ್ನಬಹುದು.
ಮಧ್ಯಾಹ್ನ ಅಥವಾ ರಾತ್ರಿ ಅಕ್ಕಿಯ ಪಲಾವ್, ಆಲೂಗಡ್ಡೆ ಸಬ್ಜಿ, ಅಕ್ಕಿ ಇಡ್ಲಿ, ಪುದೀನಾ ರಾಯ್ತ, ಪನ್ನೀರ್ ಖೀರ್ ಸೇವನೆ ಮಾಡಬಹುದು.
ಪನ್ನೀರ್ ಖೀರ್ ಮಾಡಲು ಬೇಕಾಗುವ ಸಾಮಗ್ರಿ :
ಪನ್ನೀರ್ 100 ಗ್ರಾಂ, ಒಂದು ಲೀಟರ್ ಹಾಲು, ಎರಡು ಚಮಚ ಖೋವಾ, ಅರ್ಧ ಕಪ್ ಸಕ್ಕರೆ, ಒಂದು ಕಪ್ ನೀರು, ಸ್ವಲ್ಪ ಏಲಕ್ಕಿ ಪುಡಿ, ಕೇಸರಿ ದಳ, ಸ್ವಲ್ಪ ಗೋಡಂಬಿ, ಬಾದಾಮಿ,
ಪನ್ನೀರ್ ಖೀರ್ ಮಾಡುವ ವಿಧಾನ :
ಒಂದು ಪಾತ್ರೆಗೆ ನೀರನ್ನು ಹಾಕಿ ಸಕ್ಕರೆ ಹಾಕಿ ಬಿಸಿ ಮಾಡಿ. ಅದಕ್ಕೆ ಪನ್ನೀರ್ ನ ಸಣ್ಣ ಸಣ್ಣ ತುಂಡುಗಳನ್ನು ಹಾಕಿ. 5-7 ನಿಮಿಷ ಪನ್ನೀರ್ ಬೆಂದ ನಂತ್ರ ಗ್ಯಾಸ್ ಬಂದ್ ಮಾಡಿ ನೀರಿನಿಂದ ಪನ್ನೀರ್ ಹೊರಗೆ ತೆಗೆಯಿರಿ. ಇನ್ನೊಂದು ಪಾತ್ರೆಗೆ ಹಾಲನ್ನು ಹಾಕಿ ಬಿಸಿ ಮಾಡಿ. ಹಾಲು ಅರ್ಧ ಲೀಟರ್ ಆಗುವವರೆಗೆ ಕುದಿಸಿ.
ನಂತ್ರ ಹಾಲಿಗೆ ಖೋವಾ ಹಾಗೂ ಪನ್ನೀರ್ ಹಾಕಿ ಸರಿಯಾಗಿ ಮಿಕ್ಸ್ ಮಾಡಿ. ನಂತ್ರ ಉಳಿದ ಸಕ್ಕರೆ ಹಾಗೂ ಕೇಸರಿಯನ್ನು ಹಾಕಿ ಮಿಕ್ಸ್ ಮಾಡಿ. ಸ್ವಲ್ಪ ಕುದಿಸಿದ ನಂತ್ರ ಗ್ಯಾಸ್ ಬಂದ್ ಮಾಡಿ ಏಲಕ್ಕಿ, ಬಾದಾಮಿ, ಗೋಡಂಬಿ ಹಾಕಿ ಅಲಂಕರಿಸಿ.