ನವರಾತ್ರಿಯಲ್ಲಿ ಪ್ರತಿದಿನ ದುರ್ಗೆಯ 9 ರೂಪಗಳನ್ನು ಪೂಜಿಸಲಾಗುತ್ತದೆ. ನವರಾತ್ರಿಯಲ್ಲಿ ಮಾಡಿದ ವೃತ ಹಾಗೂ ಪೂಜೆಯಿಂದ ತಾಯಿ ದುರ್ಗೆಯ ಕೃಪೆ ಸದಾ ನೆಲೆಸಿರುತ್ತದೆ ಎಂಬ ನಂಬಿಕೆಯಿದೆ. ನವರಾತ್ರಿಯಲ್ಲಿ ಮಾಡುವ ಕೆಲ ಕೆಲಸಗಳಿಂದ ತಾಯಿ ಆಶೀರ್ವಾದವೊಂದೆ ಸಿಗೋದಿಲ್ಲ ಜೊತೆಗೆ ನಕಾರಾತ್ಮಕ ಶಕ್ತಿ ಪ್ರಭಾವ ಕಡಿಮೆಯಾಗುತ್ತದೆ.
ನವರಾತ್ರಿಯಂದು ನಕಾರಾತ್ಮಕ ಶಕ್ತಿಯನ್ನು ದೂರ ಮಾಡಲು ಮನೆಯ ಮುಖ್ಯ ದ್ವಾರದ ಮುಂದೆ ಸ್ವಸ್ತಿಕವನ್ನು ರಚಿಸಬೇಕು. ಇದ್ರ ಜೊತೆಗೆ ಗಣೇಶನ ಚಿತ್ರವನ್ನೂ ಬಿಡಿಸಿ. ಇದ್ರಿಂದ ಎಲ್ಲ ಸಂಕಷ್ಟ ದೂರವಾಗುತ್ತದೆ.
ನವರಾತ್ರಿಯಂದು ಮಾವಿನ ಎಲೆ ಹಾಗೂ ಅಶೋಕ ಎಲೆಗಳಿಂದ ಮಾಡಿದ ಮಾಲೆಯನ್ನು ತಯಾರಿಸಿ ಮನೆಯ ಮುಖ್ಯ ದ್ವಾರಕ್ಕೆ ಹಾಕುವುದ್ರಿಂದ ಮನೆಯಲ್ಲಿರುವ ಎಲ್ಲ ನಕಾರಾತ್ಮಕ ಶಕ್ತಿ ದೂರವಾಗುತ್ತದೆ.
ಮನೆಯ ಮುಖ್ಯ ದ್ವಾರದಲ್ಲಿ ಲಕ್ಷ್ಮಿಯ ಹೆಜ್ಜೆಯನ್ನು ಬಿಡಿಸಿ. ಇದು ಮನೆಯಲ್ಲಿ ಸದಾ ಸುಖ-ಶಾಂತಿ ನೆಲೆಸುವಂತೆ ಮಾಡುತ್ತದೆ.
ನವರಾತ್ರಿಯ ಒಂದು ದಿನ ಲಕ್ಷ್ಮಿ ದೇವಸ್ಥಾನಕ್ಕೆ ಹೋಗಿ. ಕೇಸರಿ ಮಿಶ್ರಿತ ಅಕ್ಕಿಯನ್ನು ಲಕ್ಷ್ಮಿಗೆ ಅರ್ಪಿಸಿ.