ಹಿಂದೂ ಕ್ಯಾಲೆಂಡರ್ ಪ್ರಕಾರ, ನವರಾತ್ರಿಗೆ ಮಹತ್ವದ ಸ್ಥಾನವಿದೆ. ತಾಯಿ ದುರ್ಗೆಯ ಒಂಬತ್ತು ರೂಪಗಳನ್ನು ನವರಾತ್ರಿಯ ಸಮಯದಲ್ಲಿ ಪೂಜಿಸಲಾಗುತ್ತದೆ. ಕನ್ಯಾ ಪೂಜೆಗೂ ಮಹತ್ವವಿದೆ.
ಕನ್ಯಾ ಪೂಜೆ ಸಪ್ತಮಿಯಂದು ಪ್ರಾರಂಭವಾಗುತ್ತದೆ. ಸಪ್ತಮಿ, ಅಷ್ಟಮಿ ಮತ್ತು ನವಮಿ ದಿನದಂದು ಹುಡುಗಿಯರನ್ನು ಒಂಬತ್ತು ದೇವತೆಗಳ ರೂಪವಾಗಿ ಪೂಜಿಸಲಾಗುತ್ತದೆ. ಹುಡುಗಿಯರ ಪಾದಗಳನ್ನು ತೊಳೆದು ಗೌರವದಿಂದ ಪೋಷಿಸಲಾಗುತ್ತದೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಸಂತೋಷದಿಂದ ಪೂಜಿಸಿದ್ರೆ ತಾಯಿ, ಭಕ್ತರಿಗೆ ಆಶೀರ್ವಾದ ನೀಡುತ್ತಾಳೆಂದು ನಂಬಲಾಗಿದೆ.
ಎಲ್ಲ ಪೂಜೆಗಳ ಫಲ ಪ್ರಾಪ್ತಿಗೆ ಕನ್ಯಾ ಪೂಜೆ ಮಾಡಲಾಗುತ್ತದೆ. ಕನ್ಯಾ ಪೂಜೆಯಿಂದ ವಿದ್ಯೆ, ಸನ್ಮಾನ, ಲಕ್ಷ್ಮಿ ಒಲಿಯುತ್ತದೆ. ಶತ್ರುಗಳ ನಾಶವಾಗುತ್ತದೆ. ಹೋಮ, ಜಪ, ದಾನದಿಂದ ದೇವಿ ಪ್ರಸನ್ನವಾಗದೆ ಹೋದ್ರೂ ಕನ್ಯಾ ಪೂಜೆಯಿಂದ ಪ್ರಸನ್ನಳಾಗ್ತಾಳೆ. 10 ವರ್ಷದೊಳಗಿನ ಒಟ್ಟು 9 ಹೆಣ್ಣು ಮಕ್ಕಳ ಪೂಜೆ ಮಾಡಲಾಗುತ್ತದೆ.