ನವರಾತ್ರಿ ಹಬ್ಬ. ಸಮೀಪಿಸುತ್ತಿದೆ. ಸುಖ-ಸಂಪತ್ತಿಗಾಗಿ ಭಕ್ತರು ತಾಯಿ ದುರ್ಗೆಯ ಆರಾಧನೆಯಲ್ಲಿ ನಿರತರಾಗಿದ್ದಾರೆ. ತಂತ್ರ ಶಾಸ್ತ್ರಗಳ ಪ್ರಕಾರ ನವರಾತ್ರಿಯಂದು ಮನೆಗೆ ತರುವ ಕೆಲವೊಂದು ವಸ್ತುಗಳು ಶುಭಕರವಾಗಿದ್ದು, ಮನೆಯಲ್ಲಿ ಸದಾ ಶ್ರೀಮಂತಿಕೆ, ಸುಖ, ಸಂತೋಷ ನೆಲೆಸಿರುತ್ತದೆ.
ಶಂಖಪುಷ್ಪ : ಇದು ಬಹಳ ಕಲ್ಯಾಣಕಾರಿ ಪುಷ್ಪವಾಗಿದೆ. ಇದು ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಕುಟುಂಬಸ್ಥರ ನಡುವೆ ಸಾಮರಸ್ಯ ಬೆಳೆಸುತ್ತದೆ. ನವರಾತ್ರಿಯಂದು ಶಂಖಪುಷ್ಪವನ್ನು ಮನೆಗೆ ತಂದು ಬೆಳ್ಳಿ ಪೆಟ್ಟಿಗೆಯಲ್ಲಿಟ್ಟು ಪೂಜಾ ಸ್ಥಳದಲ್ಲಿ ಸ್ಥಾಪನೆ ಮಾಡಿ ಪೂಜೆ ಮಾಡಿ. ಇದು ವ್ಯಾಪಾರಸ್ಥರಿಗೆ ಹಾಗೂ ವಿದ್ಯಾರ್ಥಿಗಳಿಗೆ ವೃದ್ಧಿಯಾಗಲಿದೆ.
ಬಾಳೆ ಗಿಡ : ಬಾಳೆ ಗಿಡ ಸುಖ-ಸಂತೋಷ, ಸಮೃದ್ಧಿಯ ಸಂಕೇತ. ನಿಮ್ಮ ಮನೆಯಲ್ಲಿ ಬಾಳೆ ಸಸಿಯಿಲ್ಲವಾದ್ರೆ ನವರಾತ್ರಿ ಸಂದರ್ಭದಲ್ಲಿ ಬಾಳೆ ಸಸಿ ತಂದು ಬೆಳೆಸಿ. ಧೂಮ-ದೀಪಗಳಿಂದ ಇದನ್ನು ಪೂಜೆ ಮಾಡಿ.
ಪಾರಿಜಾತ ಎಲೆ : ನವರಾತ್ರಿಯಂದು ಪಾರಿಜಾತ ಎಲೆಯನ್ನು ತಂದು ಕೆಂಪು ಬಟ್ಟೆಯಲ್ಲಿ ಸುತ್ತಿಡಿ. ಪೂಜೆ ಮಾಡುವ ಸ್ಥಳದಲ್ಲಿಟ್ಟು ಪೂಜೆ ಮಾಡಿ. ಇದು ಮನೆಯ ಶಾಂತಿ, ಸಂತೋಷವನ್ನು ವೃದ್ಧಿ ಮಾಡುತ್ತದೆ.
ಆಲದ ಎಲೆ : ನವರಾತ್ರಿ ದಿನ ಆಲದ ಮರದ ಎಲೆಯನ್ನು ತಂದು ಮನೆಯಲ್ಲಿಡಿ. ಇದ್ರ ಮೇಲೆ ಅರಿಶಿನ ಅಥವಾ ಕುಂಕುಮದಿಂದ ಸ್ವಸ್ಥಿಕವನ್ನು ರಚಿಸಿ. ನಂತ್ರ ಪೂಜೆ ಮಾಡಿ.