ಲಖನೌ: ಹೊಸದಾಗಿ ಮದುವೆಯಾದ ವ್ಯಕ್ತಿ ಅತ್ಯುತ್ಸಾಹದಿಂದ ವಯಾಗ್ರ ಸೇವಿಸಿದ. ಆದರೆ ಡೋಸ್ ಹೆಚ್ಚಾದ ಕಾರಣ ಖಾಸಗಿ ಅಂಗದ ನಿಮಿರುವಿಕೆ ನಿಯಂತ್ರಣಕ್ಕೆ ಬಾರದೆ ಆಸ್ಪತ್ರೆಗೆ ದಾಖಲಾಗಿದ್ದಾನೆ. ಓವರ್‌ಡೋಸ್ ಪರಿಣಾಮ ಆತನ ಜೀವನಪೂರ್ತಿ ಉಳಿಯುವ ಸಾಧ್ಯತೆ ಇದೆ ಎಂದು ಡಾಕ್ಟರ್ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಿಂದ ಈ ಘಟನೆ ವರದಿಯಾಗಿದೆ. ಕೆಲವು ತಿಂಗಳ ಹಿಂದಷ್ಟೆ ಆತ ವಿವಾಹವಾಗಿದ್ದ. ಆದರೆ ತನ್ನ ಖಾಸಗಿ ಅಂಗ ಸಹಕರಿಸುತ್ತಿಲ್ಲ ಎಂದು ಆಪ್ತ ಮಿತ್ರರ ಬಳಿ ಹೇಳಿಕೊಂಡಿದ್ದ. ಆ ಆಪ್ತ ಮಿತ್ರರು ವಯಾಗ್ರ ಸೇವಿಸುವಂತೆ ಸಲಹೆ ನೀಡಿದ್ದರು. ಅದನ್ನು ಆ ವ್ಯಕ್ತಿ ಅನುಸರಿಸಿದ. ಆದರೆ, ಅದರ ಸೇವನಾ ಮಿತಿಯನ್ನು ಮೀರಿ ಸೇವಿಸಿದ. ದಿನಕ್ಕೆ 200 ಮಿಲಿ ಗ್ರಾಂ ಸೇವಿಸಿದ. ಇದು ನಿಗದಿತ ಪ್ರಮಾಣಕ್ಕಿಂತ ನಾಲ್ಕು ಪಟ್ಟು ಹೆಚ್ಚು.
ಮಿತಿಮೀರಿದ ವಯಾಗ್ರ ಸೇವನೆ ಪರಿಣಾಮ ಆತನ ಶಿಶ್ನ 20 ದಿನಗಳಾದರೂ ನಿಮಿರುವಿಕೆ ಕಡಿಮೆಯಾಗಲಿಲ್ಲ. ಆತನ ಪತ್ನಿಗೂ ಇದು ಸಹ್ಯವಾಗಲಿಲ್ಲ. ತೀವ್ರ ಅಸಮಾಧಾನಗೊಂಡ ಆಕೆ ತವರು ಸೇರಿದಳು. ಈ ವ್ಯಕ್ತಿ ಭಯಭೀತನಾಗಿ ಆಸ್ಪತ್ರೆಗೆ ದಾಖಲಾದ.
ಇದೀಗ ಶಸ್ತ್ರಚಿಕಿತ್ಸೆ ಮಾಡಿರುವ ಡಾಕ್ಟರ್, ಈ ಸಮಸ್ಯೆ ಇನ್ನು ಜೀವನ ಪೂರ್ತಿ ಇರುವ ಸಾಧ್ಯತೆ ಇದೆ. ಈ ದಂಪತಿಗೆ ಮಕ್ಕಳಾಗಬಹುದು. ಆದರೆ, ಈ ವ್ಯಕ್ತಿ ತನ್ನ ಪರಿಸ್ಥಿತಿ ಮರೆಮಾಚಲು ಬಿಗಿಯಾದ ಬಟ್ಟೆ ಧರಿಸಬೇಕಾಗಬಹುದು. ಸಾಮಾನ್ಯರಂತೆ ಬದುಕು ಸಾಗಿಸುವುದಕ್ಕೆ ಏನೂ ಅಡ್ಡಿಯಾಗದು ಎಂದು ಹೇಳಿದ್ದಾರೆ.