alex Certify ನವಜೋಡಿಯನ್ನು ಮತ್ತಷ್ಟು ಹತ್ತಿರ ಸೆಳೆಯುವ ಸುಂದರ, ರೋಮ್ಯಾಂಟಿಕ್ ಸ್ಥಳಗಳಿವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನವಜೋಡಿಯನ್ನು ಮತ್ತಷ್ಟು ಹತ್ತಿರ ಸೆಳೆಯುವ ಸುಂದರ, ರೋಮ್ಯಾಂಟಿಕ್ ಸ್ಥಳಗಳಿವು

ಹನಿಮೂನ್ ಎಂದ ತಕ್ಷಣ ವಿದೇಶಕ್ಕೆ ಹಾರುವ ಯೋಚನೆ ಮಾಡ್ತಾರೆ ಭಾರತೀಯರು. ಆದ್ರೆ ಭಾರತದಲ್ಲಿಯೇ ನವ ಜೋಡಿ ಸುತ್ತಾಡುವಂತಹ ಸುಂದರ ಸ್ಥಳಗಳು ಸಾಕಷ್ಟಿವೆ. ಕೇವಲ ಕಡಿಮೆ ಬೆಲೆಯೊಂದೇ ಅಲ್ಲ ನವ ಜೋಡಿಗೆ ಸುಮಧುರ ನೆನಪುಗಳನ್ನು ನೀಡಲಿದೆ ಈ ಸ್ಥಳಗಳು.

ಅಂಡಮಾನ್-ನಿಕೊಬಾರ್ : ಅಂಡಮಾನ್-ನಿಕೊಬಾರ್ ಒಂದು ಸುಂದರ ದ್ವೀಪ. ಅಲ್ಲಿನ ಶಾಂತ ಸಮುದ್ರ ತೀರ ಹಾಗೂ ಬೆಟ್ಟಗಳು ಪ್ರಣಯ ಪಕ್ಷಿಗಳಿಗೆ ಹೇಳಿ ಮಾಡಿಸಿದಂತಿವೆ. ವರ್ಣರಂಜಿತ ಹವಳದ ಬಂಡೆಗಳು, ನೀರಿನಲ್ಲಿ ಮಾಡುವ ಸಾಹಸಗಳು ದಂಪತಿಗೆ ಮತ್ತಷ್ಟು ಆನಂದ ನೀಡುತ್ತವೆ.

ಮುನ್ನಾರ್ : ಕೇರಳದ ಮುನ್ನಾರ್ ಹನಿಮೂನ್ ಗೆ ಬಹಳ ಉತ್ತಮ ಸ್ಥಳ. ಅಲ್ಲಿನ ಗಿರಿಧಾಮ ಹಾಗೂ ಹವಾಮಾನ ಮನಸ್ಸಿಗೆ ಮುದ ನೀಡುತ್ತವೆ. ನದಿ, ಜಲಪಾತ, ಪ್ರಕೃತಿ ಜೊತೆ ಸಮಯ ಸರಿದಿದ್ದು ತಿಳಿಯೋದಿಲ್ಲ. ಟ್ರೆಕ್ಕಿಂಗ್ ಹಾಗೂ ಬೈಕಿಂಗ್ ಗೆ ಪ್ರಶಸ್ತವಾದ ಜಾಗ.

ಗೋವಾ : ರೋಮ್ಯಾನ್ಸ್ ಗೆ ಎಲ್ಲ ಸಮಯದಲ್ಲೂ ಬೆಸ್ಟ್ ಪ್ಲೇಸ್ ಗೋವಾ. ಅಲ್ಲಿನ ಬೀಚ್, ರೆಸಾರ್ಟ್, ಅಲ್ಲಿನ ಸಂಸ್ಕೃತಿ ನವ ಜೋಡಿ ನಡುವೆ ಪ್ರೀತಿ ಹೆಚ್ಚಿಸುವುದರಲ್ಲಿ ಎರಡು ಮಾತಿಲ್ಲ.

ಸಿಕ್ಕಿಂ : ಸಿಕ್ಕಿಂ ಬಹಳ ಸುಂದರವಾಗಿದೆ. ಕಣಿವೆ, ಹವಾಮಾನ, ಬೆಟ್ಟಗಳು ಮನಸ್ಸನ್ನು ಆಕರ್ಷಿಸುತ್ತವೆ. ಇದು ಪ್ರವಾಸಿಗರ ಅಚ್ಚುಮೆಚ್ಚಿನ ಸ್ಥಳ. ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸ್ಸು ಕರಗಿ ಹೋಗುತ್ತದೆ. ಹೊಸ ಉತ್ಸಾಹ ಚಿಮ್ಮುತ್ತದೆ. ರೋಮ್ಯಾನ್ಸ್ ಗೆ ಇದು ಬೆಸ್ಟ್ ಪ್ಲೇಸ್.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...