alex Certify ನರೇಶ್ ರಿಂದ ದೂರವಾದ್ರಾ ಪವಿತ್ರಾ ಲೋಕೇಶ್…? ನಡೆಯುತ್ತಿದೆ ಹೀಗೊಂದು ಚರ್ಚೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನರೇಶ್ ರಿಂದ ದೂರವಾದ್ರಾ ಪವಿತ್ರಾ ಲೋಕೇಶ್…? ನಡೆಯುತ್ತಿದೆ ಹೀಗೊಂದು ಚರ್ಚೆ

ನಟಿ ಪವಿತ್ರ ಲೋಕೇಶ್ ಹಾಗೂ ನರೇಶ್ ಕಥೆ ಗೊತ್ತೇ ಇದೆ. ನರೇಶ್ ಪತ್ನಿ ಇವರಿಬ್ಬರ ಸಂಬಂಧ ಕುರಿತಂತೆ ಬೀದಿ ರಂಪ ಮಾಡಿದ್ದರು. ದೊಡ್ಡ ಮಟ್ಟದಲ್ಲಿ ಸುದ್ದಿಯಾಗ್ತಾ ಇದ್ದಂತೆ, ನಟಿ ಪವಿತ್ರ ಲೋಕೇಶ್ ಒಂದು ಕಡೆ ಸ್ಪಷ್ಟನೆ ಕೊಟ್ರೆ ನರೇಶ್ ಕೂಡ ಈ ವಿಚಾರವಾಗಿ ಸ್ಪಷ್ಟನೆ ಕೊಟ್ಟಿದ್ದರು. ನಂತರ ಒಂದೇ ರೂಂ ನಲ್ಲಿ ಇವರು ಇರೋದನ್ನ ನರೇಶ್ ಪತ್ನಿ ರಮ್ಯಾ ಬಯಲು ಮಾಡುವ ಮೂಲಕ ಮತ್ತೊಂದು ಚರ್ಚೆ ಹುಟ್ಟು ಹಾಕಿದ್ದರು.

ಇದಾದ ನಂತರವೂ ನರೇಶ್ ಜೊತೆಯಲ್ಲೇ ರಮ್ಯಾ ಇದ್ದಾರೆ ಎಂದು ಹೇಳಲಾಗಿತ್ತು. ಆದರೆ ಯಾವುದೂ ಅಧಿಕೃತವಾಗಿರಲಿಲ್ಲ. ಆದರೆ ಇದೀಗ ಮತ್ತೊಂದು ಸುದ್ದಿ ಹೊರ ಬಿದ್ದಿದೆ. ನರೇಶ್ ಹಾಗೂ ಪವಿತ್ರಾ ಈಗ ಜೊತೆಯಲ್ಲಿ ಇಲ್ಲ ಎಂದು ಹೇಳಲಾಗಿದೆ. ಇವರಿಬ್ಬರ ನಡುವಿನ ಸಂಬಂಧ ಸರಿ ಇಲ್ವಂತೆ. ಅನೇಕ ವಿಚಾರಗಳಿಗೆ ಕಾರಣಕ್ಕೆ ಕಿತ್ತಾಟ ಮಾಡಿಕೊಂಡಿದ್ದಾರಂತೆ. ಇಬ್ಬರೂ ಈಗ ಜೊತೆಯಲ್ಲಿ ಇಲ್ಲವಂತೆ.

ಇಂಥಹದೊಂದು ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಾ ಇವೆ. ಆದರೆ ಈ ವಿಚಾರಕ್ಕೆ ನರೇಶ್ ಆಗಲೀ ಅಥವಾ ಪವಿತ್ರ ಲೋಕೇಶ್ ಆಗಲಿ ಸ್ಪಷ್ಟನೆ ನೀಡಿಲ್ಲ. ವಿವಾದ ಕೇಳಿ ಬಂದಾಗ ಒಬ್ಬರ ಬೆನ್ನುಲುಬಾಗಿ ಮತ್ತೊಬ್ಬರು ನಿಂತವರು, ಇದೀಗ ಯಾಕೆ ದೂರವಾದರು ಅನ್ನೋ ಚರ್ಚೆಯಂತೂ ಆರಂಭವಾಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...