ವಡಾನಗರ್: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಬಾಲ್ಯದ ದಿನಗಳಲ್ಲಿ ರೈಲು ನಿಲ್ದಾಣವೊಂದರಲ್ಲಿ ಚಹಾ ಮಾರುತ್ತಿದ್ದರು ಎಂಬುದು ಗೊತ್ತಿರುವ ಸಂಗತಿ. ಇದೀಗ ನರೇಂದ್ರ ಮೋದಿ ಚಿಕ್ಕಂದಿನಲ್ಲಿ ಟೀ ಮಾರುತ್ತಿದ್ದ ಅದೇ ರೈಲು ನಿಲ್ದಾಣಕ್ಕೆ ಕೇಂದ್ರ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ ಭೇಟಿ ನೀಡಿದ್ದಾರೆ.
ಪ್ರಧಾನಿ ಮೋದಿಯವರು ತಮ್ಮ ಬದುಕಿನ ಸ್ಫೂರ್ತಿದಾಯಕ ಪಯಣ ಆರಂಭಿಸಿದ ಈ ಸ್ಥಳಕ್ಕೆ ಭೇಟಿ ನೀಡಿದ್ದು ನನಗೆ ಸಂತಸ ತಂದಿದೆ. ಇದೊಂದು ಹೆಮ್ಮೆಯ ವಿಚಾರ ಎಂದು ಸಂತಸ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಧರ್ಮೇಂದ್ರ ಪ್ರಧಾನ್, ಗುಜರಾತ್ ನ ವಡಾನಗರದಲ್ಲಿರುವ ಟೀ ಅಂಗಡಿಯಲ್ಲಿ ಮೋದಿಯವರು ತಮ್ಮ ತಂದೆಗೆ ಸಹಾಯ ಮಾಡುತ್ತಿದ್ದರು. ಈ ಸ್ಥಳ ಧೈರ್ಯ, ಕಠಿಣ ಪರಿಶ್ರಮ, ದೃಢ ಸಂಕಲ್ಪದ ತಾಣ ಎಂದು ಬರೆದುಕೊಂಡಿದ್ದಾರೆ.
ವಡಾನಗರ್ ನ ಈ ಐತಿಹಾಸಿಕ ಟೀ ಅಂಗಡಿ, ಇಲ್ಲಿನ ರಸ್ತೆಗಳು ಪ್ರತಿಯೊಬ್ಬನಿಗೂ ಸ್ಫೂರ್ತಿ. ಅದೆಂತಹ ಕಷ್ಟ, ಕಾರ್ಪಣ್ಯ, ಬಡತಗಳಿದ್ದರೂ ನಂಬಿಕೆ, ಕಠಿಣ ಪರಿಶ್ರಮ, ದೃಢ ಸಂಕಲ್ಪದಿಂದ ಕೋಟ್ಯಂತರ ಜನರ ಬದುಕಿನ ಆಶಾಕಿರಣವಾಗಬಹುದು ಎಂಬುದಕ್ಕೆ ನಿದರ್ಶನ ಎಂದು ಹೇಳಿದ್ದಾರೆ.
ವಡಾನಗರ್ ರೈಲ್ವೆ ನಿಲ್ದಾಣ ಭೇಟಿಗೂ ಮುನ್ನ ಧರ್ಮೇಂದ್ರ ಪ್ರಧಾನ್ ಅಲ್ಲಿನ ಪ್ರಸಿದ್ಧ ಹಟ್ಕೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.