ಕನ್ಯಾಕುಮಾರಿ ಅತ್ಯಂತ ಪ್ರಸಿದ್ಧವಾದ ತಾಣ. ಇದು ಭಾರತದ ಭೂಪಟದಲ್ಲಿರುವ ಕೊನೆಯ ಭಾಗ.
ಕುಮಾರಿ ಅಮ್ಮ ದೇವಸ್ಥಾನ ಅಥವಾ ಕನ್ಯಾಕುಮಾರಿ ದೇವಸ್ಥಾನ ಈ ಸಮುದ್ರ ತೀರದಲ್ಲಿದೆ. ಇದು ಶಿವನನ್ನು ಮದುವೆಯಾಗಲು ಸ್ವ-ಶಿಕ್ಷೆ ಕೊಟ್ಟುಕೊಳ್ಳುವ ಪಾರ್ವತಿಯ ಮರು ಅವತಾರವೆನ್ನಲಾದ ದೇವಾಲಯವಾಗಿದೆ.
ಕನ್ಯಾಕುಮಾರಿ ಎಂಬ ಹೆಸರು ‘ಕನ್ಯಾ’ ಮತ್ತು ‘ಕುಮಾರಿ’ ಎಂಬ ಎರಡು ಪದಗಳ ಸಂಯೋಗವಾಗಿದ್ದು, ಕನ್ಯಾ ಎಂದರೆ ಕನ್ನಿಕೆ, ಕುಮಾರಿ ಎಂದರೆ ಹುಡುಗಿ ಎಂದರ್ಥವಾಗುತ್ತದೆ. ಕಥೆಯ ಪ್ರಕಾರ, ಶಿವ ಮತ್ತು ಕನ್ಯಾಕುಮಾರಿಯ ಮದುವೆ ನಡೆಯದ ಕಾರಣ ಆಕೆ ಕನ್ಯೆಯಾಗಿಯೇ ಇರಲು ತೀರ್ಮಾನಿಸಿದಳು. ಮದುವೆಯ ಔತಣಕೂಟಕ್ಕೆಂದು ತರಲಾಗಿದ್ದ ದವಸ ಧಾನ್ಯಗಳೆಲ್ಲ ಉಳಿದಿದ್ದರಿಂದ ಅವು ಕಲ್ಲುಗಳಾಗಿ ಪರಿವರ್ತಿತವಾದವು ಎಂದು ಹೇಳಲಾಗುತ್ತದೆ.
ಇಂದು ಪ್ರವಾಸಿಗರು, ನಡೆಯದೆ ಇರುವ ಆ ಮದುವೆಯ ಸ್ಮರಣಾರ್ಥವಾಗಿ ದವಸ ಧಾನ್ಯಗಳ ರೂಪದಲ್ಲೇ ಸಿಗುವ ಕಲ್ಲುಗಳನ್ನು ಇಲ್ಲಿ ಕೊಂಡುಕೊಳ್ಳಬಹುದು. 8 ನೇ ಶತಮಾನದಲ್ಲಿ ಈ ದೇವಸ್ಥಾನವನ್ನು ಪಾಂಡ್ಯರು ನಿರ್ಮಿಸಿದರು. ನಂತರ ವಿಜಯನಗರ, ಚೋಳ ಹಾಗು ನಾಯಕ ರಾಜರಿಂದ ನವೀಕರಣಕ್ಕೊಳಪಟ್ಟಿತು. ಇಲ್ಲಿ ದೇವತೆಗಳ ಹೆಜ್ಜೆ ಗುರುತುಗಳನ್ನು ಕಾಣಬಹುದು.