alex Certify ನಮ್ಮ ರಾಶಿಗೂ ಹಾಗೂ ನಿದ್ರೆಗೂ ಇದೆಯಾ ಸಂಬಂಧ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಮ್ಮ ರಾಶಿಗೂ ಹಾಗೂ ನಿದ್ರೆಗೂ ಇದೆಯಾ ಸಂಬಂಧ….?

ಉತ್ತಮ ಆರೋಗ್ಯಕ್ಕೆ ನಿದ್ರೆ ಅವಶ್ಯವಾಗಿ ಬೇಕು. ಕೆಲವರು ಐದು ಗಂಟೆ ನಿದ್ರೆ ಮಾಡಿದ್ರೆ ಮತ್ತೆ ಕೆಲವರು 7 ಗಂಟೆ ನಿದ್ರೆ ಮಾಡ್ತಾರೆ. ಒಮ್ಮೊಮ್ಮೆ 8 ಗಂಟೆ ನಿದ್ರೆ ಮಾಡಿದ್ರೂ ಸುಸ್ತು ಹೋಗೋದಿಲ್ಲ. ನಮ್ಮ ರಾಶಿ ಹಾಗೂ ನಿದ್ರೆಗೂ ಸಂಬಂಧವಿದೆ. ಕೆಲ ರಾಶಿಯವರು ಸುಖ ನಿದ್ರೆ ಮಾಡಿದ್ರೆ ಮತ್ತೆ ಕೆಲ ರಾಶಿಯವರಿಗೆ ನಿದ್ರೆ ಮರೀಚಿಕೆಯಾಗಿರುತ್ತದೆ.

ಮೇಷ (ಮಾರ್ಚ್ 21 ರಿಂದ ಏಪ್ರಿಲ್ 19) : ಈ ರಾಶಿಯವರು ಸದಾ ಬ್ಯುಸಿಯಾಗಿರುತ್ತಾರೆ. ಕಡಿಮೆ ನಿದ್ರೆ ಮಾಡಿ ಏಳುವ ಅಭ್ಯಾಸ ಇವರಿಗಿರುತ್ತದೆ. ಆದ್ರೆ ಈ ರಾಶಿಯವರು 7 ಗಂಟೆ ನಿದ್ರೆ ಅವಶ್ಯವಾಗಿ ಮಾಡಬೇಕಾಗುತ್ತದೆ.

ವೃಷಭ (ಏಪ್ರಿಲ್ 20 ರಿಂದ ಮೇ 20) : ಐಷಾರಾಮಿ ಹಾಗೂ ಸ್ವಚ್ಛತೆ ಬಯಸುವ ಇವರು ಆರಾಮ ಮಾಡುವುದನ್ನು ಇಷ್ಟಪಡ್ತಾರೆ. ಹಾಗಾಗಿ ಇವರಿಗೆ 8.30 ಗಂಟೆ ನಿದ್ರೆಯ ಅಗತ್ಯವಿದೆ.

ಮಿಥುನ (ಮೇ 21 ರಿಂದ ಜೂನ್ 20) : ಈ ರಾಶಿಯವರು ಸದಾ ಒಂದಿಲ್ಲೊಂದು ಯೋಚಿಸುತ್ತಿರುತ್ತಾರೆ. ಸತತ ಎರಡು ಗಂಟೆ ಸರಿಯಾಗಿ ನಿದ್ರೆ ಮಾಡುವುದಿಲ್ಲ. ಆದ್ರೆ ಇವರು 9 ಗಂಟೆ ನಿದ್ರೆ ಮಾಡಬೇಕಾಗುತ್ತದೆ.

ಕರ್ಕ (ಜೂನ್ 21 ರಿಂದ ಜುಲೈ 22) : ಇವ್ರಿಗೆ ಹಾಸಿಗೆ ಅತಿ ಸುಖ ನೀಡುವ ಸ್ಥಳ. ನಿದ್ರೆಗೆ ಮಹತ್ವದ ಸ್ಥಾನ ನೀಡುತ್ತಾರೆ. ಈ ರಾಶಿಯವರು ಒಂಭತ್ತು ಗಂಟೆ ನಿದ್ರೆ ಮಾಡುವ ಅಗತ್ಯವಿದೆ.

ಸಿಂಹ (ಜುಲೈ 23 – ಆಗಸ್ಟ್ 22) : ಇವರಿಗೆ 6-7 ಗಂಟೆ ನಿದ್ರೆ ಸಾಕು. ನಿದ್ರೆಯಲ್ಲಿ ಸಮತೋಲನ ಮಾಡುವ ಕಲೆ ಇವರಿಗೆ ತಿಳಿದಿರುತ್ತದೆ.

ಕನ್ಯಾ (ಆಗಸ್ಟ್ 23 – ಸೆಪ್ಟೆಂಬರ್ 22) :‌ ಕೆಲಸದಲ್ಲಿ ಶ್ರದ್ದೆ ಹೊಂದಿರುವ ಇವರುಗಳು 6 ಗಂಟೆ ನಿದ್ರೆ ಮಾಡಿದರೂ ಸಹ ಮಾಡುವ ಕೆಲಸದಲ್ಲಿ ಯಶಸ್ಸು ಸಾಧಿಸುತ್ತಾರೆ.

ತುಲಾ (ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 22) : ಬಾಂಧ್ಯವದಿಂದ ಜೀವನ ಮಾಡುವ ಇವರು 7 ಗಂಟೆಗಿಂತ ಹೆಚ್ಚು ಸಮಯ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ.

ವೃಶ್ಚಿಕ (ಅಕ್ಟೋಬರ್ 23 ರಿಂದ ನವೆಂಬರ್ 21) : ಈ ರಾಶಿಯವರು ಏನೇ ಕೆಲಸ ಮಾಡಿದ್ರೂ ಶ್ರದ್ಧೆಯಿಂದ ಮಾಡ್ತಾರೆ. ನಿದ್ರೆಯನ್ನೂ ಶ್ರದ್ಧೆಯಿಂದ ಮಾಡುವ ಇವರು 10 ಗಂಟೆ ಬೇಕಾದ್ರೂ ಸುಖ ನಿದ್ರೆ ಮಾಡಬಲ್ಲರು.

ಮಕರ (ಡಿಸೆಂಬರ್ 22 ರಿಂದ ಜನವರಿ 19) : ನಿದ್ರೆಯ ಮಹತ್ವ ಇವರಿಗೆ ತಿಳಿದಿರುತ್ತದೆ. ಇವರು ಕನಿಷ್ಠ 5 ಗಂಟೆಯಾದ್ರೂ ನಿದ್ರೆ ಮಾಡಿಯೇ ಮಾಡ್ತಾರೆ.

ಕುಂಭ (ಜನವರಿ 20 ರಿಂದ ಫೆಬ್ರವರಿ 18) : ಸದಾ ಭವಿಷ್ಯದ ಬಗ್ಗೆ ಯೋಜನೆ ಮಾಡ್ತಾರೆ ಈ ರಾಶಿಯವರು. ಹಾಗಾಗಿ ಬಹಳ ಕಡಿಮೆ ಸಮಯ ನಿದ್ರೆ ಮಾಡ್ತಾರೆ. ಎಷ್ಟು ಗಂಟೆ ನಿದ್ರೆ ಮಾಡಿದ್ರೂ ಇವರ ಮೇಲೆ ನಿದ್ರೆ ಯಾವುದೇ ಪರಿಣಾಮ ಬೀರುವುದಿಲ್ಲ.

ಮೀನ (ಫೆಬ್ರವರಿ 19 ರಿಂದ ಮಾರ್ಚ್ 20) : ಈ ರಾಶಿಯವರು ನಿದ್ರಾ ಪ್ರಿಯರು. ಕನಸು ಕಾಣುವುದು ಇವರಿಗೆ ಇಷ್ಟದ ಕೆಲಸ. ಗರಿಷ್ಠ 9 ಗಂಟೆಯಾದ್ರೂ ಇವರು ನಿದ್ರೆ ಮಾಡ್ತಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...