alex Certify ನಮ್ಮ ಈ ದುರಭ್ಯಾಸಗಳಿಂದ ಕಿಡ್ನಿಗೆ ಆಗಬಹುದು ಭಾರೀ ಅಪಾಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಮ್ಮ ಈ ದುರಭ್ಯಾಸಗಳಿಂದ ಕಿಡ್ನಿಗೆ ಆಗಬಹುದು ಭಾರೀ ಅಪಾಯ…!

ಕಿಡ್ನಿ ನಮ್ಮ ದೇಹದ ಪ್ರಮುಖ ಅಂಗ. ಮೂತ್ರಪಿಂಡದಲ್ಲಿ ಕೊಂಚ ನ್ಯೂನ್ಯತೆಯಿದ್ದರೂ ತೀವ್ರ ಅನಾರೋಗ್ಯಕ್ಕೆ ತುತ್ತಾಗುವ ಅಪಾಯವಿರುತ್ತದೆ. ಕಿಡ್ನಿಗಳು ದೇಹದ ಕೊಳೆಯನ್ನು ಸ್ವಚ್ಛಗೊಳಿಸುವ ಕೆಲಸವನ್ನು ಮಾಡುತ್ತವೆ. ಹಾಗಾಗಿ ಈ ಅಂಗದ ಬಗ್ಗೆ ಕಾಳಜಿ ವಹಿಸದಿದ್ದರೆ ಮೂತ್ರಪಿಂಡ ವೈಫಲ್ಯ ಅಥವಾ ಮೂತ್ರಪಿಂಡಕ್ಕೆ ಹಾನಿಯಾಗುವ ಅಪಾಯವಿರುತ್ತದೆ. ಕೆಲವೊಂದು ದುರಭ್ಯಾಸಗಳು ನಮ್ಮ ಕಿಡ್ನಿಗೆ ಅಪಾಯ ಉಂಟುಮಾಡುತ್ತವೆ, ಅವು ಯಾವುವು ಅನ್ನೋದನ್ನು ನೋಡೋಣ.

ಕಡಿಮೆ ನೀರು ಕುಡಿಯುವುದು: ನೀರಿನ ಸಹಾಯದಿಂದ ದೇಹದೊಳಗಿನ ಕೊಳೆಯನ್ನು ಶೋಧಿಸುವುದು ನಮ್ಮ ಮೂತ್ರಪಿಂಡದ ಕೆಲಸ. ನೀವು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯದಿದ್ದರೆ ಮೂತ್ರಪಿಂಡದಲ್ಲಿ ಕಲ್ಲುಗಳಾಗಬಹುದು. ದೇಹದಲ್ಲಿ ಹಲವಾರು ರೀತಿಯ ಸಮಸ್ಯೆಗಳು ಉಂಟಾಗಬಹುದು.

ಅತಿಯಾದ ಮದ್ಯ ಸೇವನೆ: ಆಲ್ಕೋಹಾಲ್ ಆರೋಗ್ಯಕ್ಕೆ ಹಾನಿಕಾರಕವೆಂದು ಪರಿಗಣಿಸಲಾಗಿದೆ, ಆದರೆ ಎಷ್ಟೋ ಮಂದಿ ಚಟಕ್ಕೆ ಬಿದ್ದು ಆರೋಗ್ಯಕ್ಕೆ ತೊಂದರೆ ಮಾಡಿಕೊಳ್ತಾರೆ. ಅತಿಯಾಗಿ ಮದ್ಯ ಸೇವಿಸುವವರ ಕಿಡ್ನಿ ಸಂಪೂರ್ಣ ಹಾಳಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಅಲ್ಕೋಹಾಲ್‌ನಿಂದ ದೂರವಿರಿ.

ಹೆಚ್ಚು ಉಪ್ಪು ಸೇವನೆ: ಉಪ್ಪಿನಲ್ಲಿ ಸೋಡಿಯಂ ಪ್ರಮಾಣವು ತುಂಬಾ ಹೆಚ್ಚಾಗಿರುತ್ತದೆ. ಇದು ನಿಮ್ಮ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಅತಿಯಾದ ಉಪ್ಪು ಸೇವನೆ ಮೂತ್ರಪಿಂಡದ ಕಾಯಿಲೆಗಳಿಗೆ ಪ್ರಮುಖ ಕಾರಣವಾಗಬಹುದು. ಒಂದು ದಿನದಲ್ಲಿ 5 ಗ್ರಾಂ ಗಿಂತ ಹೆಚ್ಚು ಉಪ್ಪನ್ನು ಸೇವಿಸಬೇಡಿ.

ನೋವು ನಿವಾರಕಗಳ ಸೇವನೆ: ತಲೆನೋವು, ಹಲ್ಲುನೋವು ಹೀಗೆ ದೇಹದಲ್ಲಿ ಎಂಥದ್ದೇ ನೋವು ಬಂದರೂ ಕೆಲವರು ಪೇಯ್ನ್‌ ಕಿಲ್ಲರ್‌ಗಳನ್ನು ತೆಗೆದುಕೊಳ್ತಾರೆ. ಈ ಮಾತ್ರೆಗಳು ಅತ್ಯಂತ ಅಪಾಯಕಾರಿ. ಇವು ಮೂತ್ರಪಿಂಡಗಳಿಗೆ ಹಾನಿ ಮಾಡುತ್ತವೆ. ಅತಿಯಾದ ಪೇಯ್ನ್‌ ಕಿಲ್ಲರ್‌ ಸೇವನೆಯಿಂದ ಕಿಡ್ನಿ ಕ್ಯಾನ್ಸರ್‌ ಕೂಡ ಬರಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...