ಮಹಿಳೆಯೊಬ್ಬರು ತಡರಾತ್ರಿ ಸೂಟ್ಕೇಸ್ ಹಿಡಿದು ತಿರುಗುತ್ತಿದ್ದ ವೇಳೆ ಅವರನ್ನು ತಡೆದ ಗಸ್ತು ಪೊಲೀಸರು ಸೂಟ್ಕೇಸ್ ಪರಿಶೀಲಿಸಿದಾಗ ಬೆಚ್ಚಿಬಿದ್ದಿದ್ದಾರೆ. ಇಂತಹದೊಂದು ಆಘಾತಕಾರಿ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿ ನಡೆದಿದೆ.
ಘಟನೆಯ ವಿವರ: ಪ್ರೀತಿ ಶರ್ಮಾ ಎಂಬಾಕೆ ತನ್ನ ಪತಿಯಿಂದ ದೂರವಾದ ಬಳಿಕ ಫಿರೋಜ್ ಎಂಬಾತನ ಜೊತೆ ಲಿವ್ ಇನ್ ಸಂಬಂಧದಲ್ಲಿ ಇದ್ದಳು. ಆತನನ್ನು ಮದುವೆಯಾಗುವ ಉದ್ದೇಶವನ್ನು ಪ್ರೀತಿ ಹೊಂದಿದ್ದು ಆದರೆ ಇದಕ್ಕೆ ಆತ ನಿರಾಕರಿಸಿದ್ದ ಎನ್ನಲಾಗಿದೆ.
ಇದರಿಂದ ಕೋಪಗೊಂಡ ಪ್ರೀತಿ ಶರ್ಮ, ಫಿರೋಜ್ ನನ್ನು ರೇಜರ್ನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದು, ಬಳಿಕ ದೇಹವನ್ನು ಸೂಟ್ಕೇಸ್ ನಲ್ಲಿ ತುರುಕಿ ಸಾಗಿಸುತ್ತಿದ್ದಳು ಎನ್ನಲಾಗಿದೆ.
ಈ ವೇಳೆ ತಡೆದ ಪೊಲೀಸರು ಸೂಟ್ಕೇಸ್ ಪರಿಶೀಲಿಸಿ ಬೆಚ್ಚಿಬಿದ್ದಿದ್ದಾರೆ. ಬಳಿಕ ಮಹಿಳೆಯ ವಿಚಾರಣೆ ನಡೆಸಿದ ವೇಳೆ ಘಟನೆಯ ವಿವರ ಬೆಳಕಿಗೆ ಬಂದಿದೆ. ಇದೀಗ ಆಕೆಯ ವಿರುದ್ಧ ಕೇಸ್ ದಾಖಲಿಸಲಾಗಿದೆ.