
ಹೌದು, ಕುವೈತ್ ನಗರದಲ್ಲಿ ಸಾಕು ಸಿಂಹವೊಂದು ತನ್ನ ಆವರಣದಿಂದ ತಪ್ಪಿಸಿಕೊಂಡು ವಸತಿ ಪ್ರದೇಶಕ್ಕೆ ಪ್ರವೇಶಿಸಿ ಭೀತಿಯನ್ನು ಸೃಷ್ಟಿಸಿದೆ.
ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿರುವ ಯುವತಿಯನ್ನು ಸಿಂಹದ ಮಾಲಕಿ ಎಂದು ಹೇಳಲಾಗಿದೆ.
ಸಿಂಹವನ್ನು ತನ್ನ ತೋಳುಗಳಲ್ಲಿ ಗಟ್ಟಿಯಾಗಿ ಹಿಡಿದುಕೊಂಡು ರಸ್ತೆಯಲ್ಲಿ ನಡೆಯುತ್ತಾ ಮುಂದೆ ಸಾಗುತ್ತಿದ್ರೆ, ಆಕೆಯ ತೋಳಿನಿಂದ ಬಿಡಿಸಿಕೊಳ್ಳಲು ಸಿಂಹ ಒದ್ದಾಡಿದೆ.
ಇದನ್ನು ನೋಡಿದ ಕೆಲವರು ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಟ್ವಿಟ್ಟರ್ ನಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು 4.5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಸಿಂಹವು ಯುವತಿ ಮತ್ತು ಆಕೆಯ ತಂದೆಗೆ ಸೇರಿದ್ದು ಎಂದು ಕುವೈತ್ ಪೊಲೀಸರು ತಿಳಿಸಿದ್ದಾರೆ ತಪ್ಪಿಸಿಕೊಂಡಿದ್ದ ಸಿಂಹವನ್ನು ಹಿಡಿಯಲು ಸಹಾಯ ಮಾಡಿದ ಅಧಿಕಾರಿಗಳು, ನಂತರ ಅದನ್ನು ಅದರ ಮಾಲೀಕರಿಗೆ ಹಿಂತಿರುಗಿಸಿದ್ದಾರೆ.
ಕುವೈತ್‌ನಲ್ಲಿ ಸಿಂಹ ಮತ್ತು ಹುಲಿಗಳಂತಹ ಪ್ರಾಣಿಗಳನ್ನು ಸಾಕುವುದು ಕಾನೂನುಬಾಹಿರವಾಗಿದೆ. ಆದರೂ ಕೂಡ ಕೆಲವರು ಸಾಕುಪ್ರಾಣಿಗಳಾಗಿ ಮಾಡಿಕೊಂಡಿದ್ದಾರೆ.