
ವಿಡಿಯೋದಲ್ಲಿ ರಷ್ಯಾದ ಮಿಲಿಟರಿ ಬೆಂಗಾವಲು ಪಡೆಯ ವಾಹನಗಳು ಉಕ್ರೇನ್ನ ರಾಜಧಾನಿಯೊಳಕ್ಕೆ ಪ್ರವೇಶ ಪಡೆಯುವ ಮುನ್ನ ರಸ್ತೆಯ ಮಧ್ಯದಲ್ಲಿ ನಿಂತ ವ್ಯಕ್ತಿಯೊಬ್ಬ ಅವುಗಳನ್ನು ತಡೆಯಲು ಯತ್ನಿಸುತ್ತಿರೋದನ್ನು ಕಾಣಬಹುದಾಗಿದೆ.
ಈ ನಡುವೆ ಉಕ್ರೇನ್ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾದ ಪಡೆಗಳು ರಾತ್ರಿ ವೇಳೆಯಲ್ಲಿ ಕೈವ್ನ್ನು ನಾಶಗೊಳಿಸಲು ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
ನಾನು ಈ ವಿಚಾರವನ್ನು ಮುಕ್ತವಾಗಿ ಹೇಳಲೇಬೇಕು. ಈ ರಾತ್ರಿಯು ಹಗಲಿಗಿಂತಲೂ ಹೆಚ್ಚು ಕಷ್ಟಕರವಾಗಿದೆ. ನಮ್ಮ ದೇಶದ ಅನೇಕ ನಗರಗಳು ದಾಳಿಗೆ ಒಳಗಾಗಿವೆ ಎಂದು ಝೆಲೆನ್ಸ್ಕಿ ದೇಶವನ್ನುದ್ದೇಶಿಸಿ ಮಾತನಾಡಿದ ವಿಡಿಯೋದಲ್ಲಿ ಈ ಮಾತನ್ನು ಹೇಳಿದ್ದಾರೆ.