ಕೊರೋನಾ ಸೋಂಕು ಚಿತ್ರರಂಗದವರನ್ನ ಬಿಡುವಂತೆ ಕಾಣುತ್ತಿಲ್ಲ. ಬಾಲಿವುಡ್ ತಾರೆಗಳ ಬೆನ್ನುಬಿದ್ದಿದ್ದ ವೈರಸ್ ಈಗ ದಕ್ಷಿಣದ ಸೆಲೆಬ್ರೆಟಿಗಳನ್ನ ಆವರಿಸಿಕೊಳ್ಳುತ್ತಿದೆ.
ಈಗ ಬಾಹುಬಲಿ ಕಟ್ಟಪ್ಪ ಖ್ಯಾತಿಯ ತಮಿಳು ನಟ ಸತ್ಯರಾಜ್ ಹಾಗೂ ಸ್ಟಾರ್ ನಿರ್ದೇಶಕ ಪ್ರಿಯದರ್ಶನ್ ಗೆ ಸೋಂಕು ದೃಢವಾಗಿದೆ. ಇಬ್ಬರು ಚೆನ್ನೈನ ಪ್ರತ್ಯೇಕ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರ ಆರೋಗ್ಯ ಸ್ಥಿರವಾಗಿದೆ ಎಂದು ಇತ್ತೀಚೆಗೆ ಬಿಡುಗಡೆಯಾದ ಹೆಲ್ತ್ ಬುಲೆಟಿನ್ ನಿಂದ ತಿಳಿದುಬಂದಿದೆ.
ನಟ ಸತ್ಯರಾಜ್ ಅವರು ಕೊರೋನಾ ಪಾಸಿಟಿವ್ ಬಂದ್ಮೇಲೆ, ಚೆನ್ನೈನ ಅಮಿನ್ಜಿಕ್ಕರೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಇತ್ತ ನಿರ್ದೇಶಕ ಪ್ರಿಯದರ್ಶನ್ ರವರು ಕೊರೋನಾ ಸೋಂಕಿಗೆ ತುತ್ತಾಗಿದ್ದು, ಚೆನ್ನೈನ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆ ಮುಂದುವರೆದಿದ್ದು ಅವರ ಆರೋಗ್ಯ ಸ್ಥಿರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ತೆಲುಗಿನ ಸ್ಟಾರ್ ನಟ ಮಹೇಶ್ ಬಾಬು, ಸಂಗೀತ ನಿರ್ದೇಶಕ ತಮನ್ ಹಾಗೂ ನಟಿ ತ್ರಿಷಾರವರಲ್ಲಿ ಇತ್ತೀಚೆಗೆ ಕೊರೋನಾ ಸೋಕು ಪತ್ತೆಯಾಗಿದೆ.