ಬೆಂಗಳೂರು: ನಟ ಸಂಚಾರಿ ವಿಜಯ್ ಇನ್ನು ಉಸಿರಾಡುತ್ತಿದ್ದಾರೆ. ಮೆದುಳು ನಿಷ್ಕ್ರಿಯವಾದ ತಕ್ಷಣ ಯಾವುದೇ ವ್ಯಕ್ತಿ ಸಾಯಲ್ಲ. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಅಪೊಲೋ ಆಸ್ಪತ್ರೆ ನ್ಯೂರೋ ಸರ್ಜನ್ ಡಾ.ಅರುಣ್ ನಾಯ್ಕ್ ತಿಳಿಸಿದ್ದಾರೆ.
ಸಂಚಾರಿ ವಿಜಯ್ ಆರೋಗ್ಯದ ಬಗ್ಗೆ ಇಲ್ಲಸಲ್ಲದ ಸುದ್ದಿಗಳು ಹರಡುತ್ತಿವೆ. ಹೀಗಾಗಿ ನಾನೇ ಖುದ್ದು ಸ್ಪಷ್ಟನೆ ನೀಡುತ್ತಿದ್ದೇನೆ. ವಿಜಯ್ ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಅವರ ಮೆದುಳು ಮಾತ್ರ ನಿಷ್ಕ್ರಿಯವಾಗಿದೆ. ಆದರೆ ಶ್ವಾಸಕೋಶ, ಕಿಡ್ನಿ, ಹೃದಯ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಸಮಸ್ಯೆಗಳಿಲ್ಲ. ಅವರ ಎಲ್ಲಾ ಅಂಗಾಂಗಳು ಕೆಲಸ ಮಾಡುತ್ತಿವೆ. ಮೆದುಳು ನಿಷ್ಕ್ರಿಯವಾದ ತಕ್ಷಣ ವ್ಯಕ್ತಿ ಸಾಯಲ್ಲ. ಹೃದಯ ಬಡಿತ ನಿಂತಾಗ ಮಾತ್ರ ಡೆತ್ ಎಂದು ಘೋಷಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಇಂದು ಸಂಜೆ ವೇಳೆಗೆ ಮತ್ತೊಮ್ಮೆ ಪರೀಕ್ಷೆ ಮಾಡುತ್ತೇವೆ. ಆ ನಂತರದಲ್ಲಿ ಅವರ ಆರೋಗ್ಯದ ಬಗ್ಗೆ ತಿಳಿಸುತ್ತೇವೆ. ಸಂಚಾರಿ ವಿಜಯ್ ಕುಟುಂಬದವರೇ ಅಂಗಾಂಗ ದಾನದ ಬಗ್ಗೆ ನಿರ್ಧರಿಸಿದ್ದು, ಜೀವನ ಸಾರ್ಥಕತೆ ಸಂಸ್ಥೆಯಿಂದ ಅಂಗಾಂಗ ಕಸಿ ಮಾಡಲಾಗುತ್ತೆ ಎಂದು ತಿಳಿಸಿದರು.