ತಮ್ಮ ನಟನೆಯ ಮೂಲಕವೇ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಬಾಲಿವುಡ್ ನಟ ಮನೋಜ್ ಬಾಜಪೇಯಿ ಅವರ ಹುಟ್ಟುಹಬ್ಬದ ದಿನದಂದು ಒಬ್ಬ ಪತ್ರಕರ್ತೆ ಮಾನವೀಯ ಅಂತಃಕರಣವನ್ನು ಅನಾವರಣಗೊಳಿಸಿದ್ದಾರೆ.
ಆಕೆ ತುಂಬು ಗರ್ಭಿಣಿಯಾಗಿದ್ದ ವೇಳೆ ಮಾನವೀಯತೆಯಿಂದ ನಡೆದುಕೊಂಡ ಘಟನೆಯನ್ನು ಸ್ಮರಿಸುತ್ತಾ ಅವರ ಹುಟ್ಟುಹಬ್ಬಕ್ಕೆ ಶುಭಕೋರಿದ್ದು, ಬಾಜಪೇಯಿ ಅವರು ಅವರ ಮಗನಿಗೆ ವಿಶಸ್ ಹೇಳಿದ್ದಾರೆ.
ʼಫ್ಯಾಮಿಲಿ ಮ್ಯಾನ್ʼ ಎಂಬ ವೆಬ್ ಸೀರಿಸ್ ಮೂಲಕ ಮನ್ನಣೆ ಗಳಿಸುತ್ತಿರುವ ಮನೋಜ್ ಅವರ ಹುಟ್ಟುಹಬ್ಬವಿತ್ತು, ನಾನು 8 ತಿಂಗಳ ಗರ್ಭಿಣಿಯಾಗಿದ್ದೆ. 2013 ರಲ್ಲಿ ನವದೆಹಲಿಯಲ್ಲಿ ಅವರ ಸಿನಿಮಾದ ಪ್ರಚಾರಕ್ಕೆಂದು ಬಂದಿದ್ದರು. ಇತರ ಕೆಲವು ಪತ್ರಕರ್ತರೊಂದಿಗೆ, ಅವರು ನಮ್ಮನ್ನು ಅವರು ಉಳಿದುಕೊಂಡಿದ್ದ ಹೋಟೆಲ್‌ನಲ್ಲಿ ಕರೆದಿದ್ದರು. ನಾನು ನನ್ನ ಸರದಿಗಾಗಿ ಕಾಯುತ್ತಿರುವಾಗ ಪತ್ರಕರ್ತರು ವೇಟಿಂಗ್ ಏರಿಯಾದಲ್ಲಿ ಕುಳಿತಿದ್ದರು. ನಾನು ಅವರನ್ನು ಸಂದರ್ಶಿಸುವ ಸಮಯ ಬಂದಾಗ, ಅವರು ಒಳಗೆ ಹೋಗಬಹುದೇ? ಎಂದರು ನನಗೆ ಒಂದು ಕ್ಷಣ ಗೊಂದಲವಾಯಿತು. ನಂತರ ಅವರು ನನ್ನನ್ನು ಕೋಣೆಗೆ ಕರೆದೊಯ್ದರು, ನನ್ನನ್ನು ಹಾಸಿಗೆಯ ಮೇಲೆ ಕೂರಿಸಿದರು, ನನ್ನ ಪಾದಗಳನ್ನು ಹಾಸಿಗೆಯ ಮೇಲೆ ಇಡಲು ಹೇಳಿದರು ಮತ್ತು ಎರಡು ದಿಂಬುಗಳನ್ನು ಮೇಲಕ್ಕೆತ್ತಿ ನನ್ನ ಬೆನ್ನಿನ ಹಿಂದೆ ಇಟ್ಟರು. ಅವರೇ ದೂರದ ಮಂಚದ ಮೇಲೆ ಕುಳಿತುಕೊಂಡರು. 8 ತಿಂಗಳ ಗರ್ಭಿಣಿ, ನಾನು ಆ ದಿನ ತುಂಬಾ ಸಮಯ ನಿಂತಿದ್ದೆ ಮತ್ತು ಅಂದಿನಿಂದ ನಾನು ಇಂತಹ ವ್ಯಕ್ತಿತವನ್ನು ಎಂದಿಗೂ ಮರೆತಿಲ್ಲ ಎಂದು ಟ್ವೀಟ್ ನಲ್ಲಿ ಅವರ ವ್ಯಕ್ತಿತ್ವವನ್ನು ಅನಾವರಣಗೊಳಿಸಿದ್ದಾರೆ.
ಮುಂದುವರೆದು, ಅವರನ್ನು ಇತರೆ ವ್ಯಕ್ತಿಗಳಿಗಿಂತ ಬೇರೊಂದು ಸ್ಥಾನವನ್ನು ನೀಡುತ್ತದೆ. ಬಹುಶಃ ಅವರು ಈ ಬಗ್ಗೆ ಮರೆತಿರಬಹುದು, ಆದರೆ ನಾನು ಎಂದಿಗೂ ಮರೆಯುವುದಿಲ್ಲ. ಹುಟ್ಟು ಹಬ್ಬದ ಶುಭಾಶಯಗಳು ಮನೋಜ್ ಎಂದು ಹೇಳುವ ಮೂಲಕ ಪತ್ರಕರ್ತೆ ರಿತುಪರ್ಣ ಚಟರ್ಜಿ ಅವರು ಮನೋಜ್ ಬಗ್ಗೆ ತೆರೆದಿಟ್ಟ ಕಥೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ನಟನಿಗೆ ಶುಭಾಶಯಗಳ ಸುರಿಮಳೆಯೇ ಹರಿಯಿತು.