
ಬಾಲಿವುಡ್‌ನ ಬಿಗ್ ಬಿ ಅಮಿತಾಭ್ ಮತ್ತು ನಟಿ ರೇಖಾ ಅವರ ಪ್ರಸ್ತಾಪ ಬಂದಾಗಲೆಲ್ಲಾ ಇಬ್ಬರ ಪ್ರೀತಿಯ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಅಮಿತಾಭ್-ರೇಖಾ ಪರಸ್ಪರ ಪ್ರೀತಿಸಿದ್ರೂ ಮದುವೆಯಾಗಲೇ ಇಲ್ಲ. ಇಲ್ಲಿ ನಾವ್ ನಿಮಗೆ ಹೇಳ್ತಿರೋದು ಬಹುತೇಕರಿಗೆ ಗೊತ್ತಿಲ್ಲದಂತಹ ಶಾಕಿಂಗ್ ಸತ್ಯ. ವಾಸ್ತವವಾಗಿ ಒಮ್ಮೆ ಅಮಿತಾಭ್, ನಟಿ ರೇಖಾಗೆ ಕಪಾಳಮೋಕ್ಷ ಮಾಡಿದ್ದರು.
ಅಮಿತಾಭ್ ಮತ್ತು ರೇಖಾ ಅವರ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಅದೇ ಸಮಯದಲ್ಲಿ ಇಬ್ಬರೂ ನಿಜ ಜೀವನದಲ್ಲಿ ಕೂಡ ಪ್ರೀತಿಯಲ್ಲಿ ಬಿದ್ದಿದ್ದರು. ಆದರೆ ಬಿಗ್ ಬಿ, ರೇಖಾ ಅವರೊಂದಿಗಿನ ಸಂಬಂಧವನ್ನು ಎಂದಿಗೂ ಬಹಿರಂಗವಾಗಿ ಹೇಳಿಕೊಳ್ಳಲಿಲ್ಲ. ಒಂದು ಹಂತದಲ್ಲಿ ರೇಖಾ, ಅಮಿತಾಬ್ ಮತ್ತು ಜಯಾ ಮನೆಯಲ್ಲಿ ಬಿರುಕು ಮೂಡಿಸಲು ಪ್ರಯತ್ನಿಸಿದ್ದರೂ ಅನ್ನೋ ವದಂತಿಯೂ ಇದೆ. ಇಂತಹ ಊಹಾಪೋಹಗಳಿಗೆ ಕಡಿವಾಣ ಹಾಕಲು ಮತ್ತು ವೈವಾಹಿಕ ಜೀವನವನ್ನು ಉಳಿಸಿಕೊಳ್ಳಲು ಬಿಗ್ ಬಿ, ರೇಖಾ ಅವರೊಂದಿಗೆ ಕೆಲಸ ಮಾಡಲು ನಿರಾಕರಿಸಿದರು.
ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಅವರ ಸಹ-ನಟರ ನಡುವಿನ ಸಂಬಂಧದ ಬಗ್ಗೆ ಚರ್ಚಿಸುವುದು ತುಂಬಾ ಸಾಮಾನ್ಯವಾಗಿದೆ. 80ರ ದಶಕದಲ್ಲಿ ಅಮಿತಾಭ್ ಜೊತೆ ರೇಖಾ ಹೆಸರು ತಳುಕು ಹಾಕಿಕೊಂಡ ಸಮಯದಲ್ಲೇ, ಬಿಗ್ ಬಿ ಇರಾನಿ ಡ್ಯಾನ್ಸರ್ ಜೊತೆಗೆ ಡೇಟಿಂಗ್‌ನಲ್ಲಿದ್ದಾರೆ ಅನ್ನೋ ಸುದ್ದಿಯೂ ಹಬ್ಬಿತ್ತು. ಆ ಇರಾನಿ ಸುಂದರಿ ಲಾವಾರಿಸ್‌ನಲ್ಲಿ ಬಿಗ್ ಬಿ ಜೊತೆ ಕೆಲಸ ಮಾಡಿದ್ದಾಳೆ. ಬಿಗ್ ಬಿ ಹಾಗೂ ಇರಾನಿ ಡ್ಯಾನ್ಸರ್ ಪ್ರೇಮ ಪ್ರಕರಣ ಎಲ್ಲೆಡೆ ಚರ್ಚೆಗೆ ಗ್ರಾಸವಾದಾಗ ರೇಖಾ ಕಿವಿಗೂ ಬಿದ್ದಿತ್ತು. ಬಿಗ್‌ಬಿಯಿಂದ ತನಗೆ ಮೋಸವಾಗಿದೆ ಅನ್ನೋದು ರೇಖಾ ಅರಿವಿಗೆ ಬಂದಿತ್ತು.
ಈ ಬಗ್ಗೆ ಮಾತನಾಡಲೆಂದೇ ಶೂಟಿಂಗ್ ಸೆಟ್‌ಗೆ ರೇಖಾ ಬಂದಿದ್ದರು. ಇದೇ ವಿಚಾರಕ್ಕೆ ಅಮಿತಾಭ್ ಹಾಗೂ ರೇಖಾ ಮಧ್ಯೆ ವಾಗ್ವಾದ ನಡೆದಿದೆ. ತಾಳ್ಮೆ ಕಳೆದುಕೊಂಡ ಅಮಿತಾಭ್ ಕೋಪದ ಭರದಲ್ಲಿ ರೇಖಾ ಕೆನ್ನೆಗೆ ಬಾರಿಸಿದ್ದರು. ಬಿಗ್ ಬಿ ವರ್ತನೆಯಿಂದ ರೇಖಾ ನೊಂದಿದ್ದರು. ಪರಿಣಾಮ ಸಿಲ್ಸಿಲಾ ಚಿತ್ರದಲ್ಲಿ ಅಮಿತಾಬ್ ಮತ್ತು ಜಯಾ ಜೊತೆಗೆ ಕೆಲಸ ಮಾಡಲು ನಿರಾಕರಿಸಿದ್ದರಂತೆ. ನಿರ್ದೇಶಕ ಯಶ್ ಚೋಪ್ರಾ ರೇಖಾ ಮನವೊಲಿಸಿದ್ದರು. ಇದಾದ ಬಳಿಕ ಅಮಿತಾಭ್, ರೇಖಾ ಹಾಗೂ ಜಯಾ ಬಾಧುರಿ ಯಾವುದೇ ಸಿನೆಮಾದಲ್ಲೂ ಒಟ್ಟಿಗೆ ಕಾಣಿಸಿಕೊಂಡಿಲ್ಲ.