ಚಿಕ್ಕಮಗಳೂರು: ನಟಿ ರಮ್ಯಾ ಸದ್ಯ ಸಿನಿಮಾ ರಂಗಕ್ಕೆ ಕಂಬ್ಯಾಕ್ ಆಗಿದ್ದಾರೆ. ತಮ್ಮದೇ ನಿರ್ಮಾಣದ ಸಿನಿಮಾ ಒಂದರಲ್ಲಿ ಬ್ಯುಸಿಯಾಗಿದ್ದಾರೆ. ಈ ಬೆನ್ನಲ್ಲೇ ರಾಜ್ಯದಲ್ಲಿ ನಡೆಯುವ ಕೆಲವು ಕಾರ್ಯಕ್ರಮದಲ್ಲಿ ಭಾಗಿಯಾಗ್ತಾ ಇದ್ದಾರೆ. ಇದರ ನಡುವೆ ಅವರ ಹೇಳಿಕೆಯೊಂದು ಫುಲ್ ವೈರಲ್ ಆಗಿದ್ದು, ಸಿ.ಟಿ. ರವಿ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಹೌದು, ರಮ್ಯಾ ರಾಜಕೀಯ ಹೇಳಿಕೆಗಳು ಆಗಾಗ ವೈರಲ್ ಆಗ್ತಾ ಇರುತ್ತವೆ. ಜೊತೆಗೆ ಚರ್ಚೆಗೂ ಗ್ರಾಸ ಆಗ್ತವೆ. ಇದೀಗ ಈ ನಟಿ ಭಾರತವನ್ನು ಪಾಕಿಸ್ತಾನಕ್ಕೆ ಹೋಲಿಸಿದ್ದಾರೆ. ಈ ಹೇಳಿಕೆ ಬಿಜೆಪಿ ನಾಯಕರನ್ನು ಕೆರಳುವಂತೆ ಮಾಡಿದೆ. ಈ ವಿಚಾರವಾಗಿ ಮಾತನಾಡಿರುವ ಬಿಜೆಪಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ, ರಮ್ಯಾ ಈ ರೀತಿ ಯಾಕೆ ಮಾತನಾಡಿದರೋ ಗೊತ್ತಿಲ್ಲ. ಹಿಂದಿನ ಸರ್ಕಾರದಲ್ಲಿ ಎಷ್ಟು ಹಣದುಬ್ಬರ ಇತ್ತು ಅಂತ ಒಮ್ಮೆ ನೋಡಿಕೊಳ್ಳಬೇಕಾಗುತ್ತದೆ.
ನೆರೆ ದೇಶದಲ್ಲಿ ಪೆಟ್ರೋಲ್ ಪ್ರತಿ ಲೀಟರ್ ರೂ. 250, ಹಾಲು ಪ್ರತಿ ಲೀಟರ್ ಗೆ ರೂ. 300 ರಂತೆ ಮಾರಾಟ ಆಗುತ್ತಿದೆ. ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ಪಾಕಿಸ್ತಾನ, ಶ್ರೀಲಂಕಾ, ಚೀನಾ, ಅಮೆರಿಕದಲ್ಲಿ ಹಣದುಬ್ಬರ ಹೆಚ್ಚಿದೆ. ನಮ್ಮಲ್ಲಿ ಹಣದುಬ್ಬರ ಪ್ರಮಾಣ ಕಡಿಮೆ ಇದೆ. ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿದ್ದಾಗ ಭಾರತದಲ್ಲಿ ಹಣದುಬ್ಬರ ಪ್ರಮಾಣ ಶೇಕಡ 9 ರಷ್ಟಿತ್ತು ಈಗ ಅದು ಕಡಿಮೆಯಾಗಿದೆ. ನಮ್ಮಲ್ಲಿ ಕೇವಲ ಶೇಕಡ 4 ರಷ್ಟು ಹಣದುಬ್ಬರ ಇದೆ. ಹೀಗೆ ಹೇಳಿಕೆ ಕೊಡುವ ಮುನ್ನ ಒಮ್ಮೆ ಯೋಚಿಸಬೇಕು ಎಂದರು.