
ಫೇಸ್ಬುಕ್ ಪುಟದಲ್ಲಿನ ಸಂದೇಶವು, ಮಿಯಾ ಖಲೀಫಾವನ್ನು ಪ್ರೀತಿಸುವ ಜನರು ತಮ್ಮ ಜೀವನವನ್ನು ನೆನಪಿಟ್ಟುಕೊಳ್ಳಲು ಅವರ ಪ್ರೊಫೈಲ್ಗೆ ಭೇಟಿ ನೀಡುವುದರಿಂದ ಆರಾಮವನ್ನು ಕಂಡುಕೊಳ್ಳುತ್ತಾರೆ ಎಂದು ಭಾವಿಸುವುದಾಗಿ ಬರೆದಿದ್ದಾರೆ. ಇದನ್ನು ಓದಿದ ಅಭಿಮಾನಿಗಳಿಗೆ ಚಿಂತೆಗೀಡಾಗುವಂತೆ ಮಾಡಿದೆ. ಅಲ್ಲದೆ ಎಲ್ಲರೂ ಮಿಯಾ ಸತ್ತಿದ್ದಾರೆಯೇ ಎಂಬ ಬಗ್ಗೆ ಪ್ರಶ್ನೆ ಮೂಡಿದೆ.
ಇದಲ್ಲದೆ, ಪ್ರೊಫೈಲ್ಗೆ ಭೇಟಿ ನೀಡುವ ಯಾರಿಗೂ ಕೂಡ ಯಾವುದೇ ಪೋಸ್ಟ್ಗಳು ಕಾಣಿಸುವುದಿಲ್ಲ. ಮಿಯಾ ಫೇಸ್ಬುಕ್ ಟೈಮ್ಲೈನ್ನಲ್ಲಿ ಒಂದು ಪೋಸ್ಟ್ ಮಾತ್ರ ಇದೆ. ಇದರಿಂದಾಗಿ ಅವರ ಅಭಿಮಾನಿಗಳು ಗೊಂದಲಕ್ಕೊಳಗಾಗಿದ್ದಾರೆ. ಶೀಘ್ರದಲ್ಲೇ, ಆಕೆಯ ಸಾವಿನ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಆಘಾತಗೊಂಡಿದ್ದಾರೆ.
ಇನ್ನು ಈ ಎಲ್ಲಾ ವದಂತಿಗಳಿಗೆ ಸ್ವತಃ ತಾರೆ ಮಿಯಾ ಅವರು ತೆರೆ ಎಳೆದಿದ್ದಾರೆ. ತಾವು ಜೀವಂತವಿರುವುದಾಗಿ ಟ್ವಿಟ್ಟರ್ ನಲ್ಲಿ ಮೆಮೆ ಮೂಲಕ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ತಾನು ಜೀವಂತವಾಗಿದ್ದು, ಆರೋಗ್ಯವಿರುವುದಾಗಿ ತಿಳಿಸಿದ್ದಾರೆ. ಮಿಯಾ ಟ್ವೀಟ್ ಮಾಡಿದ ತಕ್ಷಣ ಅಭಿಮಾನಿಗಳು ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಮಿಯಾ ಫೇಸ್ಬುಕ್ ಖಾತೆಯನ್ನು ಹ್ಯಾಕ್ ಮಾಡಿರಬಹುದು ಅಥವಾ ಯಾರಾದರೂ ತಮಾಷೆ ಮಾಡಿರಬಹುದು ಎಂದು ಹಲವರು ಊಹಿಸಿದ್ದಾರೆ. ಮಿಯಾ ಖಲೀಫಾ ಸಾವಿನ ವದಂತಿ ಸುದ್ದಿ ಅಂತರ್ಜಾಲದಲ್ಲಿ ವೈರಲ್ ಆಗಿದ್ದು ಇದೇ ಮೊದಲಲ್ಲ. ಜೂನ್ 2020 ರಲ್ಲಿ, ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದವು.