
ಬಾಲಿವುಡ್ ನಟಿ ಮಲೈಕಾ ಅರೋರಾ ತಮ್ಮ ಫಿಟ್ನೆಸ್ ಕಾರಣಕ್ಕೆ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. 48ನೇ ವಯಸ್ಸಿನಲ್ಲೂ ಸಿಕ್ಕಾಪಟ್ಟೆ ಫಿಟ್ ಆಗಿದ್ದಾರೆ ಈ ನಟಿ. ಇದಕ್ಕಾಗಿ ಜಿಮ್‌ನಲ್ಲಿ ಸಾಕಷ್ಟು ಬೆವರು ಹರಿಸ್ತಾರೆ ಈಕೆ. ತಮ್ಮ ಸೌಂದರ್ಯ ಹಾಗೂ ಫಿಟ್ನೆಸ್ ವಿಚಾರದಲ್ಲಿ ರಾಜಿ ಮಾಡಿಕೊಳ್ಳೋದಿಲ್ಲ.
ವ್ಯಾಯಾಮದ ಹೊರತಾಗಿ, ಸ್ಲಿಮ್-ಟ್ರಿಮ್ ಆಗಿರಲು ಮಲೈಕಾ ಏನೇನು ಮಾಡ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. ಮಲೈಕಾ ಊಟದ ವಿಷಯದಲ್ಲಿ ಫುಲ್ ಸ್ಟ್ರಿಕ್ಟ್, ಎಲ್ಲವನ್ನೂ ತಿಂತಾರಂತೆ ಆದ್ರೆ ಹಿತಮಿತವಾಗಿ. ಮಲೈಕಾ ಬೆಳಗ್ಗೆ ಎದ್ದ ತಕ್ಷಣ ಒಂದು ಲೀಟರ್ ನೀರಿಗೆ ನಿಂಬೆ ರಸ ಹಾಗೂ ಜೇನುತುಪ್ಪ ಬೆರೆಸಿ ಕುಡಿಯುತ್ತಾರೆ.
ವರ್ಕೌಟ್ ಆದ್ಮೇಲೆ ಬಾಳೆಹಣ್ಣು ಹಾಕಿರುವ ಪ್ರೋಟೀನ್ ಶೇಕ್ ಸವಿಯುತ್ತಾರೆ. ಅದಾದ್ಮೇಲೆ ದೇಹವನ್ನ ಡಿಟಾಕ್ಸ್ ಮಾಡುವ ಸಲುವಾಗಿ ದಿನವಿಡೀ ಸಾಕಷ್ಟು ನೀರು ಕೂಡ ಕುಡಿಯುತ್ತಾರಂತೆ. ಬೆಳಗಿನ ಉಪಹಾರಕ್ಕೆ ತಾಜಾ ಹಣ್ಣುಗಳು, ಅವಲಕ್ಕಿ, ಇಡ್ಲಿ, ಉಪ್ಪಿಟ್ಟು ಅಥವಾ ಮಲ್ಟಿಗ್ರೇನ್ ಟೋಸ್ಟ್ ಸೇವಿಸ್ತಾರೆ. ಜೊತೆಗೆ ಮೊಟ್ಟೆಯ ಬಿಳಿಭಾಗವನ್ನು ಮಾತ್ರ ತಿನ್ನುತ್ತಾರೆ.

ಮಲೈಕಾ ತಾಜಾ ಹಣ್ಣಿನ ರಸವನ್ನು, ಮೊಟ್ಟೆಯ ಬಿಳಿಭಾಗವನ್ನು ಬ್ರೌನ್ ಬ್ರೆಡ್ ಟೋಸ್ಟ್‌ನೊಂದಿಗೆ ಸೇವಿಸಲು ಇಷ್ಟಪಡುತ್ತಾರೆ. ಮಧ್ಯಾಹ್ನದ ಊಟಕ್ಕೆ ಮಲೈಕಾ 2 ರೊಟ್ಟಿ, ಅನ್ನ, ತರಕಾರಿ, ಚಿಕನ್ ಮತ್ತು ಮೊಳಕೆಕಾಳು ತಿನ್ನುತ್ತಾರೆ.
ರಾತ್ರಿಯ ಊಟವನ್ನು ಸಿಂಪಲ್ ಆಗಿಡಲು ಇಷ್ಟಪಡ್ತಾರೆ. ಬೇಯಿಸಿದ ತರಕಾರಿಗಳ ಸಲಾಡ್ ಮತ್ತು ಸೂಪ್ ಸೇವಿಸ್ತಾರೆ. ಇದು ಅವರ ನಿತ್ಯದ ಆಹಾರ ಕ್ರಮ. ಆಗಾಗ ಚೀಟ್ ಮೀಲ್ ತೆಗೆದುಕೊಂಡ್ರೂ ಅತಿಯಾದ ಪ್ರಮಾಣದಲ್ಲಿ ಜಂಕ್ ಫುಡ್ ಗಳನ್ನು ಸೇವಿಸುವುದಿಲ್ಲ.