ಬಾಲಿವುಡ್ ನಟಿ ಊರ್ವಶಿ ರೌಟೇಲ ಹಾಗೂ ಖ್ಯಾತ ಕ್ರಿಕೆಟಿಗ ರಿಷಬ್ ಪಂತ್ ನಡುವೆ ಕುಚ್ ಕುಚ್ ಇದೆ ಎಂಬ ವದಂತಿ ಕಳೆದ ಹಲವು ದಿನಗಳಿಂದಲೂ ಕೇಳಿ ಬರುತ್ತದೆ. ಇದಕ್ಕೆ ನಟಿ ನೀಡಿದ ಹೇಳಿಕೆಯೊಂದು ಸಹ ಕಾರಣವಾಗಿತ್ತು.
ಸಂದರ್ಶನ ಒಂದರಲ್ಲಿ ಪಾಲ್ಗೊಂಡಿದ್ದ ನಟಿ ಊರ್ವಶಿ ರೌಟೇಲಾ, ‘ಈ ಹಿಂದೆ ನವದೆಹಲಿಯಲ್ಲಿ ಮಿಸ್ಟರ್ ಆರ್.ಪಿ. ಎಂಬ ವ್ಯಕ್ತಿ ನನ್ನನ್ನು ಭೇಟಿಯಾಗಲು ಹಾತೊರೆದಿದ್ದ. ನಾನು ಮಲಗಿದ್ದ ಸಮಯದಲ್ಲೂ 16 ರಿಂದ 17 ಮಿಸ್ ಕಾಲ್ ನೀಡಿದ್ದ ಎಂದು ಹೇಳಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆರ್.ಪಿ. ಎಂದರೆ ರಿಷಬ್ ಪಂತ್ ಎಂದೇ ಎಲ್ಲರೂ ಭಾವಿಸಿದ್ದರು.
ಇದಕ್ಕೆ ಈಗ ಸಾಮಾಜಿಕ ಜಾಲತಾಣದ ಮೂಲಕ ಉತ್ತರ ನೀಡಿರುವ ರಿಷಬ್ ಪಂತ್, ಕೆಲವರು ಜನಪ್ರಿಯತೆ ಹಾಗೂ ಹೆಡ್ಡಿಂಗ್ ನಲ್ಲಿ ಕಾಣಿಸಿಕೊಳ್ಳಬೇಕೆಂಬ ಕಾರಣಕ್ಕೆ ಸಂದರ್ಶನಗಳಲ್ಲಿ ಎಷ್ಟೊಂದು ಸುಳ್ಳು ಹೇಳುತ್ತಾರೆ ಎಂದು ಪರೋಕ್ಷವಾಗಿ ಊರ್ವಶಿ ರೌಟೇಲಾ ಅವರಿಗೆ ಟಾಂಗ್ ನೀಡಿದ್ದಾರೆ. ಅಲ್ಲದೆ ನನ್ನ ಬೆನ್ನು ಹತ್ತದಿರುವ ಸಹೋದರಿ ಎಂದು ಹ್ಯಾಷ್ ಟ್ಯಾಗ್ ಬಳಸುವ ಮೂಲಕ ಊರ್ವಶಿಯವರನ್ನು ಸಹೋದರಿ ಎಂದು ಸಂಬೋಧಿಸಿದ್ದಾರೆ.