ನಿಮಗೆ ಎಂದಾದ್ರೂ ಕ್ರೀಡಾಂಗಣದಿಂದಲೇ ಐಪಿಎಲ್ ಪಂದ್ಯವನ್ನು ನೇರವಾಗಿ ವೀಕ್ಷಿಸುವ ಅವಕಾಶ ಸಿಕ್ಕಿದೆಯೇ ? ಇಲ್ಲದಿದ್ದರೆ, ಈ ಮಹಿಳೆಯ ಅದೃಷ್ಟದ ಬಗ್ಗೆ ನೀವು ತುಂಬಾ ಅಸೂಯೆ ಪಡುತ್ತೀರಿ. ರವೀನಾ ಅಹುಜಾ ಎಂಬುವವರು ನಟಿ ಅನುಷ್ಕಾ ಶರ್ಮಾ ಜೊತೆ ಕುಳಿತು ಐಪಿಎಲ್ ಪಂದ್ಯವನ್ನು ವೀಕ್ಷಿಸಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ರವೀನಾ ಅವರು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿರುವ ಕಾರ್ಪೊರೇಟ್ ಬಾಕ್ಸ್‌ನಲ್ಲಿ ಕುಳಿತು ಪಂದ್ಯ ವೀಕ್ಷಿಸಿದ್ದಾರೆ. ಈ ಗ್ಯಾಲರಿಯಲ್ಲಿ ನಟಿ ಅನುಷ್ಕಾ ಕೂಡ ತನ್ನ ಪತಿ ಆಟವಾಡುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಚಿಯರ್ ಅಪ್ ಮಾಡುತ್ತಿದ್ದರು. ಇದನ್ನು ಅಹುಜಾ ವಿಡಿಯೋ ರೆಕಾರ್ಡ್ ಮಾಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದ ವೇಳೆ ರವೀನಾ, ಅನುಷ್ಕಾ ಚಪ್ಪಾಳೆ ತಟ್ಟಿ ಆರ್ಸಿಬಿಗೆ ಹುರಿದುಂಬಿಸುತ್ತಿರುವ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಅನುಷ್ಕಾ ಅವರ ಪತಿ, ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಈ ತಂಡದಲ್ಲಿ ಆಡುತ್ತಿದ್ದಾರೆ.
ತನ್ನ ಜೀವನದಲ್ಲಿ ಮೊದಲ ಬಾರಿಗೆ ನೇರ ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಹೋಗಿದ್ದೆ. ಇದು ಅತ್ಯುತ್ತಮ ಅನುಭವಗಳಲ್ಲಿ ಒಂದಾಗಿದೆ ಎಂದು ವಿಡಿಯೋ ಪೋಸ್ಟ್ ಮಾಡಿದ ರವೀನಾ ಅಹುಜಾ ಈ ಶೀರ್ಷಿಕೆ ನೀಡಿದ್ದಾರೆ.
ಈ ವಿಡಿಯೋ ಒಂದು ಮಿಲಿಯನ್‌ಗೂ ಅಧಿಕ ಲೈಕ್‌ಗಳೊಂದಿಗೆ ವೈರಲ್ ಆಗಿದೆ. ಅನುಷ್ಕಾ ಶರ್ಮಾ ಅವರ ನೋಟವನ್ನು ಸೆಳೆಯಲು ಮತ್ತು ಕಾರ್ಪೊರೇಟ್ ಬಾಕ್ಸ್‌ನಿಂದ ಆಟವನ್ನು ಆನಂದಿಸಲು ರವೀನಾ ಎಷ್ಟು ಅದೃಷ್ಟಶಾಲಿಯಾಗಿದ್ದಾರೆ ಎಂದು ಜನರು ಪ್ರತಿಕ್ರಿಯೆ ನೀಡಿದ್ದಾರೆ.
https://youtu.be/oGs477LHdBw