ಬಾಲ್ಯದಿಂದಲೇ ಮಕ್ಕಳಿಗೆ ಅಳುವುದು ಕೆಟ್ಟದ್ದು ಎಂದು ನಾವು ಪಾಠ ಮಾಡ್ತೇವೆ. ನಗು ಒಳ್ಳೆಯದು. ಆರೋಗ್ಯಕ್ಕೂ ನಗು ಒಳ್ಳೆಯದು. ಅಳಬೇಡಿ ಎಂದು ಮಕ್ಕಳ ಅಳುವನ್ನು ನಿಲ್ಲಿಸುವ ಪ್ರಯತ್ನ ಮಾಡ್ತೇವೆ. ಆದ್ರೆ ಸಂಶೋಧನೆಯೊಂದು ಬೇರೆಯೇ ಹೇಳುತ್ತದೆ.
ಲಾಫ್ಟರ್ ಕ್ಲಬ್ ಬಗ್ಗೆ ನೀವು ಕೇಳಿರುತ್ತೀರಾ. ಸಾವಿರಾರು ಲಾಫ್ಟರ್ ಕ್ಲಬ್ ಗಳು ದೇಶದಾದ್ಯಂತ ಇದೆ. ಜನರು ಒಂದೆಡೆ ಸೇರಿ ಚಿತ್ರವಿಚಿತ್ರವಾಗಿ ನಗ್ತಿರುತ್ತಾರೆ. ಆದ್ರೆ ಅಳುವ ಕ್ಲಬ್ ಬಗ್ಗೆ ನಿಮಗೆ ಗೊತ್ತಾ? ಈ ಕ್ಲಬ್ ಗೆ ಬರುವ ಜನರು ತಮ್ಮ ನೋವನ್ನು ಎಲ್ಲರ ಮುಂದೆ ಹೇಳಿಕೊಂಡು ಅಳ್ತಾರೆ. ಅತ್ತು ಅತ್ತು ಒತ್ತಡವನ್ನು ಕಡಿಮೆ ಮಾಡಿಕೊಳ್ತಾರೆ.
ಈ ಕ್ಲಬ್ ನಲ್ಲಿ ಮನೋವೈದ್ಯರೂ ಇರುತ್ತಾರೆ. ಕ್ಲಬ್ ಸದಸ್ಯತ್ವ ಪಡೆದವರು ಪ್ರತಿ ದಿನ ಅಲ್ಲಿಗೆ ಬಂದು ಅಳ್ತಾರೆ. ಕಣ್ಣೀರಿನ ಮೂಲಕ ದೇಹಕ್ಕೆ ಹಾನಿ ಮಾಡುವ ಹಾರ್ಮೋನ್ ದೇಹದಿಂದ ಹೊರಗೆ ಬರುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಇದ್ರಿಂದ ಒತ್ತಡ, ಖಿನ್ನತೆ ಎಲ್ಲವೂ ಕಡಿಮೆಯಾಗುತ್ತದೆಯಂತೆ.
ಸಂಶೋಧನೆಯೊಂದು ಅತ್ತ ನಂತ್ರ ಜನರು ರಿಲ್ಯಾಕ್ಸ್ ಆಗ್ತಾರೆ ಎಂದಿದೆ. ಅಳು ಒಂದು ಆರೋಗ್ಯಕರ ವ್ಯಾಯಾಮವಂತೆ. ಒತ್ತಡವನ್ನು ದೂರ ಮಾಡಿ ನೆಮ್ಮದಿ ನೀಡುತ್ತದೆಯಂತೆ.