ಕರ್ಪೂರ ಒಂದು ಧೂಪದ ವಸ್ತು. ಕರ್ಪೂರವನ್ನು ಪೂಜೆ, ಔಷಧಿ ಹಾಗೂ ಸುಗಂಧಕ್ಕಾಗಿ ಬಳಕೆ ಮಾಡಲಾಗುತ್ತದೆ. ಹಿಂದೂ ಧರ್ಮದಲ್ಲಿ ಆರತಿಗೆ ಕರ್ಪೂರ ಅತ್ಯವಶ್ಯಕ.
ಕರ್ಪೂರದ ಸುಗಂಧ ಮನಸ್ಸನ್ನು ಶಾಂತಿಗೊಳಿಸುತ್ತದೆ. ಅದ್ರ ವಾಸನೆ ಕೆಮ್ಮು ಹಾಗೂ ವಾತವನ್ನು ನಾಶ ಮಾಡುತ್ತದೆ. ಒಂದು ಆರತಿ ಬಟ್ಟಲಿಗೆ ಕರ್ಪೂರವನ್ನು ಹಾಕಿ ಅದಕ್ಕೆ ಅಗ್ನಿ ಸ್ಪರ್ಶ ಮಾಡಿ.
ನಂತ್ರ ದೇವಾನುದೇವತೆಗಳಿಗೆ ಆರತಿ ಬೆಳಗಿ. ಆರತಿ ತಟ್ಟೆಯನ್ನು ನಿಮ್ಮ ಹೃದಯದ ಸಮ ಅಥವಾ ಎತ್ತರಕ್ಕೆ ಹಿಡಿದುಕೊಳ್ಳಿ. ಆರತಿ ಬೆಳಗಿದ ನಂತ್ರ ಎರಡೂ ಕೈಗಳಿಂದ ಬೆಳಗುತ್ತಿರುವ ಕರ್ಪೂರದ ಹೊಗೆಯನ್ನು ತೆಗೆದುಕೊಂಡು ಮುಖ ಹಾಗೂ ತಲೆಗೆ ತಾಗಿಸಿ.
ಕರ್ಪೂರದ ಸುಗಂಧವನ್ನು ಮನೆಗೆಲ್ಲ ಹರಡಬೇಕು. ಕರ್ಪೂರದ ವಾಸನೆ ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸುತ್ತದೆ. ಇದ್ರಿಂದ ವಾಸ್ತು ದೋಷ ನಿವಾರಣೆಯಾಗುತ್ತದೆ. ಕರ್ಪೂರವನ್ನು ಶ್ರೀಗಂಧದ ಜೊತೆ ಮಿಶ್ರಣ ಮಾಡಿ ಹಣೆಗೆ ಹಚ್ಚಿಕೊಂಡ್ರೆ ಕೋಪ ಕಡಿಮೆಯಾಗುತ್ತದೆ.
ಕರ್ಪೂರದಲ್ಲಿ ಔಷಧಿ ಗುಣವೂ ಇದೆ. ಕರ್ಪೂರದ ಎಣ್ಣೆಯನ್ನು ಚರ್ಮಕ್ಕೆ ಹಚ್ಚಿಕೊಂಡ್ರೆ ರಕ್ತ ಪರಿಚಲನೆ ಸುಗಮವಾಗುತ್ತದೆ. ಕುತ್ತಿಗೆ ನೋವಿದ್ದವರು ಕರ್ಪೂರದ ಅಂಶವಿರುವ ಮುಲಾಮನ್ನು ಹಚ್ಚಿಕೊಳ್ಳಬೇಕು. ಊತ, ಮೊಡವೆ, ಎಣ್ಣೆಯುಕ್ತ ಚರ್ಮದವರು ಕರ್ಪೂರವನ್ನು ಹೆಚ್ಚು ಬಳಸಬೇಕು.