alex Certify ನಕಾರಾತ್ಮಕ ಶಕ್ತಿ ಸೆಳೆಯುತ್ತೆ ಇಂಥಾ ಮನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಕಾರಾತ್ಮಕ ಶಕ್ತಿ ಸೆಳೆಯುತ್ತೆ ಇಂಥಾ ಮನೆ

ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಿರಬೇಕಾದಲ್ಲಿ ಮನೆಯ ವಾತಾವರಣ ಮಹತ್ವದ ಪಾತ್ರ ವಹಿಸುತ್ತದೆ. ಸುವಾಸನೆಯುಕ್ತ ಮನೆಗೆ ಯಾವುದೇ ನಕಾರಾತ್ಮಕ ಶಕ್ತಿ ಪ್ರವೇಶ ಮಾಡುವುದಿಲ್ಲ. ಧೂಪ, ಅಗರಬತ್ತಿ ಸೇರಿದಂತೆ ಸುಗಂಧಿತ ದ್ರವ್ಯಗಳನ್ನು ಹಚ್ಚಿ ಮನೆಯನ್ನು ಸುಗಂಧವಾಗಿಟ್ಟುಕೊಳ್ಳಬೇಕು.

ಗರ್ಭಿಣಿಯರು ಸೇವಿಸಲೇಬಾರದು ಈ ಆಹಾರ

ಯಾವುದೇ ಕಾರಣಕ್ಕಿರಲಿ ಮನೆಯಲ್ಲಿ ಕೆಟ್ಟ ವಾಸನೆ ಬರ್ತಾ ಇದ್ದಲ್ಲಿ ತಕ್ಷಣ ಮನೆಯನ್ನು ಸ್ವಚ್ಛಗೊಳಿಸಿ, ಮನೆಯೊಳಗೆ ಧೂಪ ಹಚ್ಚಿ. ಗ್ರಂಥಗಳ ಪ್ರಕಾರ ಯಾವ ಸ್ಥಳದಲ್ಲಿ ದುರ್ಗಂಧ, ಕೊಳಕು ಇರುತ್ತದೆಯೋ ಆ ಜಾಗದಲ್ಲಿ ಲಕ್ಷ್ಮಿ ಸೇರಿದಂತೆ ಯಾವುದೇ ದೇವಾನುದೇವತೆಗಳು ನೆಲೆಸುವುದಿಲ್ಲ. ದರಿದ್ರತೆ ಹಾಗೂ ದುಷ್ಟ ಶಕ್ತಿಗಳು ಮನೆ ಮಾಡಿರುತ್ತವೆ.

ಸುಗಂಧಿತ ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರುತ್ತಾಳೆ. ಎಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೋ ಅಲ್ಲಿ ಧನಾತ್ಮಕ ಶಕ್ತಿಯ ಪ್ರಭಾವವಿರುತ್ತದೆ. ಆದಷ್ಟು ನೈಸರ್ಗಿಕ ವಸ್ತುಗಳಿಂದ ಮಾಡಲಾದ ಸುಗಂಧಗಳನ್ನು ಬಳಸಿ. ಸಾಂಬ್ರಾಣಿ, ಬೇವಿನ ಎಲೆ, ಕರ್ಪೂರದಿಂದ ಮನೆಯ ವಾತಾವರಣವನ್ನು ಬದಲಾಯಿಸಿ.

ಸುಗಂಧಭರಿತ ಮನೆ, ಮನಸ್ಸನ್ನು ಶಾಂತವಾಗಿರಿಸುತ್ತದೆ. ಇದ್ರಿಂದ ಜಗಳ-ಗಲಾಟೆಯಾಗುವುದು ಕಡಿಮೆ.

BIG NEWS: ರಾಜ್ಯದಲ್ಲಿ ಮತ್ತೊಮ್ಮೆ ಸಚಿವ ಸಂಪುಟ ವಿಸ್ತರಣೆ ಸುಳಿವು ನೀಡಿದ BSY

ಮಲ್ಲಿಗೆ ಪರಿಮಳ ವಿವಾಹಿತ ದಂಪತಿ ಮಾತ್ರ ಬಳಸಬೇಕು. ಇದು ಕಾಮ ಭಾವನೆಯನ್ನು ಹೆಚ್ಚು ಮಾಡುತ್ತದೆ.

ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದೇ ಕೆಲಸಕ್ಕೆ ಹೋಗುವ ಮೊದಲು ಅರೇಬಿಯನ್ ಮಲ್ಲಿಗೆ ವಾಸನೆಯ ಸುಗಂಧವನ್ನು ಹಾಕಿಕೊಂಡು ಹೋಗಿ.

ವಿದ್ಯಾರ್ಥಿಗಳು, ಗುಲಾಬಿ ಪರಿಮಳದ ಸುಗಂಧ ಹಾಕಿಕೊಳ್ಳಬಾರದು. ಅದು ವಿದ್ಯಾರ್ಥಿಗಳನ್ನು ಚಂಚಲ ಮಾಡುತ್ತದೆ.

ಮಲಗುವ ಮೊದಲು ತುಪ್ಪದಲ್ಲಿ ಅದ್ದಿದ ಕರ್ಪೂರವನ್ನು ಹಚ್ಚಿ. ಇದ್ರಿಂದ ಮನಸ್ಸು ಶಾಂತವಾಗಿ ಕಣ್ತುಂಬ ನಿದ್ರೆ ಬರುತ್ತದೆ.

ಆರೋಗ್ಯಕರವಾದ ‘ಪುದೀನಾ ಜ್ಯೂಸ್’ ಮಾಡಿ ಕುಡಿಯಿರಿ

ತಿಂಗಳಲ್ಲಿ ಎರಡು ಬಾರಿ ಒಣಗಿದ ಸಗಣಿ ಅಥವಾ ಬೆಂಜೋಯಿನ್ ನಿಂದ ಮನೆಗೆ ಹೊಗೆ ಹಾಕಿ. ಕೀಟಗಳ ನಿಯಂತ್ರಣವಾಗುವ ಜೊತೆಗೆ ಆರೋಗ್ಯ ವೃದ್ಧಿಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...