ಮರಗಿಡಗಳು ಜೀವನದ ಮೇಲೆ ಪ್ರಭಾವ ಬೀರುತ್ತವೆ. ಪರಿಸರವನ್ನು ಸ್ವಚ್ಛಗೊಳಿಸುವ ಜೊತೆಗೆ ನಕಾರಾತ್ಮಕ ಶಕ್ತಿಯನ್ನು ನಾಶ ಮಾಡುತ್ತದೆ.
ಸುಖ-ಸಮೃದ್ಧಿಗಾಗಿ ಮನೆಯ ಮುಂದೆ ಕೆಲವೊಂದು ಗಿಡಗಳನ್ನು ಅವಶ್ಯಕವಾಗಿ ಬೆಳೆಸಬೇಕು.
ಮನೆಯ ಮುಂದೆ ಮುಖ್ಯವಾಗಿ ಅಶೋಕ ಗಿಡವನ್ನು ಬೆಳೆಸಬೇಕು. ದುಃಖವನ್ನು ಅಶೋಕ ಗಿಡ ಕಡಿಮೆ ಮಾಡುತ್ತದೆ. ಮನೆಯ ಹೊರಗೆ ದೊಡ್ಡ ಜಾಗದಲ್ಲಿ ಅಶೋಕ ಗಿಡ ಬೆಳೆಸಲು ಬಯಸಿದ್ದರೆ ಗಿಡದ ಮಧ್ಯೆ ಸಾಕಷ್ಟು ಅಂತರ ಇರುವಂತೆ ನೋಡಿಕೊಳ್ಳಿ. ಗಿಡ ಬೆಳೆದಂತೆ ನೋಡಲು ಸುಂದರವಾಗಿ ಕಾಣುತ್ತದೆ. ಮನೆಯ ಸುಖ, ಶಾಂತಿಗೆ ಇದು ಕಾರಣವಾಗುತ್ತದೆ.
ಮನೆಯ ಮುಂದೆ ಇರಲೇಬೇಕಾದ ಇನ್ನೊಂದು ಗಿಡವೆಂದ್ರೆ ನೆಲ್ಲಿ. ಇದಕ್ಕೆ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನವಿದೆ. ಇದನ್ನು ಭಗವಂತ ವಿಷ್ಣುವಿನ ರೂಪವೆಂದು ಪೂಜಿಸಲಾಗುತ್ತದೆ. ನಿಮ್ಮ ಮನೆಯಲ್ಲೂ ನೆಲ್ಲಿ ಗಿಡವಿದ್ದರೆ ಮನೆಯಲ್ಲಿ ಭಗವಂತ ವಾಸವಾಗಿದ್ದಾನೆಂದರ್ಥ. ನೆಲ್ಲಿ ಗಿಡ ಬೆಳೆಯುತ್ತಿದ್ದಂತೆ ಸುಖ, ಸಂತೋಷ ಹೆಚ್ಚಾಗುತ್ತದೆ. ಭಗವಂತ ವಿಷ್ಣುವಿನ ಕೃಪೆ ಸಿಗುತ್ತದೆ.
ಈ ಗಿಡವನ್ನು ಮನೆಯಲ್ಲಿ ನೆಡುವ ಜೊತೆಗೆ ಅದಕ್ಕೆ ನೀರು, ಗೊಬ್ಬರ ಹಾಕಿ ಬೆಳೆಸಬೇಕು. ಹಾಗೆ ಈ ಗಿಡಗಳಿರುವ ಜಾಗದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಿ. ಗಿಡವಿರುವ ಜಾಗವನ್ನು ದೇವರ ಮನೆಯಂತೆ ನೋಡಿ. ಸೂರ್ಯನ ಬೆಳಕು ಸರಿಯಾಗಿ ಬರುವ ಹಾಗೂ ಬೆಳೆಯಲು ಜಾಗವಿರುವ ಸ್ಥಳದಲ್ಲಿ ಈ ಎರಡೂ ಗಿಡವನ್ನು ಬೆಳೆಸಬೇಕು.