ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸಿದ್ರೆ ಯಾವುದೇ ಏಳಿಗೆ ಕಾಣಲು ಸಾಧ್ಯವಿಲ್ಲ. ಮನೆಯಲ್ಲಿ ವಾಸ್ತು ದೋಷವಿದ್ರೆ ನಕಾರಾತ್ಮಕ ಶಕ್ತಿ ಆಕರ್ಷಿತಗೊಳ್ಳುತ್ತದೆ. ವಾಸ್ತು ಶಾಸ್ತ್ರದಲ್ಲಿ ದೋಷ ಪರಿಹಾರಕ್ಕೆ ಉಪಾಯಗಳನ್ನು ಹೇಳಲಾಗಿದೆ. ಈ ಉಪಾಯಗಳನ್ನು ಅನುಸರಿಸಿದ್ರೆ ವಾಸ್ತುದೋಷ ಕಡಿಮೆಯಾಗಿ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಿ ನೆಮ್ಮದಿ ನಿಮ್ಮದಾಗುತ್ತದೆ.
ವಾಸ್ತುದೋಷ ಪರಿಹಾರಕ್ಕೆ ಕಟ್ಟಡ ಕೆಡವಬೇಕಾಗಿಲ್ಲ. ಸಣ್ಣ ಸಣ್ಣ ಉಪಾಯಗಳ ಮೂಲಕವೇ ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸಬಹುದು.
ಮನೆಯನ್ನು ಸ್ವಚ್ಛಗೊಳಿಸುವ ವೇಳೆ ನೀರಿಗೆ ಉಪ್ಪನ್ನು ಹಾಕಿ, ಮನೆಯನ್ನು ಕ್ಲೀನ್ ಮಾಡಿ. ನೀರಿಗೆ ಹಿಡಿ ಉಪ್ಪು ಹಾಕಿದ್ರೆ ಹೆಚ್ಚು ಶುಭ.
ಮನೆಗೆ ಆಗಾಗ ಗೋಮೂತ್ರವನ್ನು ಸಿಂಪಡಿಸುತ್ತಿರಬೇಕು. ಗೋಮೂತ್ರ ಸಿಂಪಡನೆಯಿಂದ ಮನೆ ಶುದ್ಧವಾಗಿರುತ್ತದೆ. ದೇವಾನುದೇವತೆಗಳು ಮನೆಯಲ್ಲಿ ನೆಲೆಸಿರುತ್ತವೆ.
ಗೋಮೂತ್ರದ ವಾಸನೆಗೆ ಹಾನಿಕಾರಕ ಕೀಟಾಣುಗಳು ನಾಶವಾಗುತ್ತವೆ. ಇದ್ರಿಂದ ಆರೋಗ್ಯ ವೃದ್ಧಿಯಾಗುವ ಜೊತೆಗೆ ಸಕಾರಾತ್ಮಕ ಶಕ್ತಿ ನೆಲೆಸಲು ಕಾರಣವಾಗುತ್ತದೆ.
ಮನೆಯ ಹೊರ ಬಾಗಿಲಿನ ಬಳಿ ರಂಗೋಲಿ ಹಾಕಬೇಕು. ಮನೆಯ ಹೊರಗೆ ಹಾಗೂ ಒಳಗೆ ಸ್ವಚ್ಛಗೊಳಿಸಿ ರಂಗೋಲಿ ಹಾಕಬೇಕು. ರಂಗೋಲಿಯಲ್ಲಿ ಸಾಕಷ್ಟು ಸಕಾರಾತ್ಮಕ ಗುಣವಿದೆ. ಇದು ತಾಯಿ ಲಕ್ಷ್ಮಿಯನ್ನು ಆಕರ್ಷಿಸುತ್ತದೆ.
ಪ್ರತಿ ದಿನ ಬೆಳಿಗ್ಗೆ ಹಾಗೂ ಸಂಜೆ ಮನೆಗೆ ಧೂಪದ ದೀಪ ಬೆಳಗಬೇಕು. ಚಂದನ, ಕರ್ಪೂರ, ಆಕಳ ತುಪ್ಪ ಹಾಗೂ ಸಂಬ್ರಾಣಿ, ಬೆಂಜೋಯಿನ್ ಮಿಶ್ರಿತ ಹೊಗೆಯನ್ನು ಮನೆಗೆ ತೋರಬೇಕು. ಇದು ನಕಾರಾತ್ಮಕ ಶಕ್ತಿ ದೂರವಾಗಲು ನೆರವಾಗುತ್ತದೆ. ಈ ವಸ್ತುಗಳಿಂದ ಬರುವ ಹೊಗೆ ಆರೋಗ್ಯಕ್ಕೂ ಒಳ್ಳೆಯದು.