alex Certify ನಕಲಿ ʼಅಶ್ಲೀಲತೆʼ ಸಾಂಕ್ರಾಮಿಕವಾಗಬಹುದು…! ತಜ್ಞರ ಎಚ್ಚರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಕಲಿ ʼಅಶ್ಲೀಲತೆʼ ಸಾಂಕ್ರಾಮಿಕವಾಗಬಹುದು…! ತಜ್ಞರ ಎಚ್ಚರಿಕೆ

ಡೀಪ್ ಫೇಕ್ ಅಶ್ಲೀಲತೆ(Deepfake pornography) ಸಾಂಕ್ರಾಮಿಕವಾಗಬಹುದಾದ ಸಾಧ್ಯತೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಪ್ರಮುಖ ಕಾನೂನು ತಜ್ಞರು ಲೈಂಗಿಕ ಕಿರುಕುಳದ ಸಾಂಕ್ರಾಮಿಕದ ಬಗ್ಗೆ ಎಚ್ಚರಿಕೆ ನೀಡಿದ್ದು, ಜನರ ಮುಖದ ಚಿತ್ರಗಳನ್ನು ಅಶ್ಲೀಲ ಚಿತ್ರಗಳೊಂದಿಗೆ ವಿಲೀನಗೊಳಿಸಲಾಗ್ತಿದೆ. ಆನ್ಲೈನ್ ನಲ್ಲಿ ಇಂತವು ಲಭ್ಯವಾಗುತ್ತಿವೆ ಎಂದು ಹೇಳಿದ್ದಾರೆ.

ಡೀಪ್ ಫೇಕ್ ಅಶ್ಲೀಲತೆಯಲ್ಲಿ ಸೆಲೆಬ್ರಿಟಿಗಳು ಮತ್ತು ಖಾಸಗಿ ವ್ಯಕ್ತಿಗಳ ಮುಖಗಳನ್ನು ಅಶ್ಲೀಲ ದೃಶ್ಯಗಳಿಗೆ ಸೇರಿಸುತ್ತಿದ್ದು, ಇದಕ್ಕಾಗಿ ಕಂಪ್ಯೂಟರ್ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ.

ಪ್ರೊಫೆಸರ್ ಕ್ಲೇರ್ ಮೆಕ್ಗ್ಲಿನ್ ಅವರು ಹೇಳುವಂತೆ, ಮಹಿಳೆಯರನ್ನು ನಿಂದಿಸುವುದು, ಕಿರುಕುಳ ನೀಡುವುದು ದುಷ್ಕರ್ಮಿಗಳಿಗೆ ಈಗ ಸುಲಭವಾಗಿದೆ.

ಬಿಬಿಸಿ ಸ್ಕಾಟ್ಲೆಂಡ್ ನ ದಿ ನೈನ್ ಹೆಚ್ಚುತ್ತಿರುವ ಇಂತಹ ಸಮಸ್ಯೆಗಳ ಬಗ್ಗೆ ತನಿಖೆ ಕೈಗೊಂಡಿದೆ.

ಸ್ಟಿಲ್ ಫೋಟೋಗಳನ್ನು ಪಡೆದು ದುರ್ಬಳಕೆ ಮಾಡಿಕೊಳ್ಳುವುದರಿಂದ ಸಮಸ್ಯೆ ಎದುವರಿಸುವವರ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿದೆ.

ಈ ರೀತಿ ತೊಂದರೆ ಅನುಭವಿಸಿದ ಬಲಿಪಶು ಒಬ್ಬಳು ತಿಳಿಸಿದಂತೆ, 10 ವರ್ಷಗಳ ಹಿಂದೆ ನಂಬಿದ್ದ ವ್ಯಕ್ತಿಯೊಬ್ಬನಿಂದ ಗೌಪ್ಯತೆ ಉಲ್ಲಂಘಿಸಲಾಗಿದೆ ಎಂಬುದನ್ನು ವಿವರಿಸಿದ್ದಾರೆ.

ಜುಡಿತ್(ಆಕೆಯ ನಿಜವಾದ ಹೆಸರಲ್ಲ) ಹೇಳಿದಂತೆ, ನನ್ನ ಮಾಜಿ ಗೆಳೆಯನಿಂದ ನಾನು ಕೆಲವು ಸಂದೇಶಗಳನ್ನು ಸ್ವಲ್ಪ ದಿನಗಳ ಹಿಂದೆ ಸ್ವೀಕರಿಸಿದ್ದೆ. ನಮ್ಮ ನಡುವೆ ಹಿಂದೆಯೇ ಬಿರುಕು ಮೂಡಿತ್ತು. ನನ್ನ ಅನೇಕ ಚಿತ್ರಗಳನ್ನು ಆತ ಫೋಟೋಶಾಪ್ ಮಾಡಿದ್ದಾನೆ ಎನ್ನುವುದು ಗೊತ್ತಾಗಿತ್ತು.

ಒಂದೆರಡು ತಿಂಗಳ ನಂತರ ಹವ್ಯಾಸಿ ಅಶ್ಲೀಲ ಸೈಟ್ ನಿಂದ ನನಗೆ ಇ -ಮೇಲ್ ಬಂದಿತ್ತು. ಅಂತರ್ಜಾಲದಲ್ಲಿ ನಿಮಗೆ ಬೇಕಿದೆಯೇ ಎಂದು ಆಕೆಯ ತಿರುಚಿದ ಫೋಟೋವನ್ನು ಹಾಕಲಾಗಿತ್ತು. ಅಶ್ಲೀಲ ಚಿತ್ರದೊಂದಿಗೆ ಆಕೆಯ ಮುಖ ಸೇರಿಸಲಾಗಿತ್ತು. ಆಕೆಯ ಮಾಜಿ ಗೆಳೆಯನೇ ಇದನ್ನು ಮಾಡಿದ್ದಾನೆ ಎಂದು ಜುಡಿತ್ ಹೇಳಿದ್ದಾರೆ.

ನಂತರದಲ್ಲಿ ಆ ಫೋಟೋಗಳನ್ನು ತೆಗೆಯಲಾಗಿದೆ. ಪೊಲೀಸರಿಂದ ಆತ ಯಾವುದೇ ಕ್ರಿಮಿನಲ್ ಆರೋಪ ಎದುರಿಸಲಿಲ್ಲ.

ವರ್ಷದಿಂದ ವರ್ಷ ಹೆಚ್ಚಾಗುತ್ತಿವೆ ಇಂತಹ ಪ್ರಕರಣ

ಅಂದ ಹಾಗೆ, ವರ್ಷದಿಂದ ವರ್ಷಕ್ಕೆ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ನಕಲಿ ಅಶ್ಲೀಲ ಯುದ್ಧದ ಇತ್ತೀಚಿನ ಬೆಳವಣಿಗೆ ಎಂದರೆ ಚಲಿಸುವ ಚಿತ್ರಗಳನ್ನು ಕುಶಲತೆಯಿಂದ ಬಳಸುತ್ತಿರುವುದಾಗಿದೆ. ಒಟ್ಟಾರೆ ಇಂತಹ ನಿದರ್ಶನಗಳು ಕಡಿಮೆ ಇದ್ದರೂ, ವರ್ಷದಿಂದ ವರ್ಷಕ್ಕೆ ಪ್ರಕರಣಗಳು ಹೆಚ್ಚುತ್ತಿವೆ ಎಂದು ಹೇಳಲಾಗಿದೆ.

2019 ರಿಂದ ಪ್ರತಿವರ್ಷ ಮೂರನೇ ಒಂದು ಭಾಗದಷ್ಟು ಹೆಚ್ಚಾಗಿದೆ ಎಂದು ಸಂತ್ರಸ್ಥರ ಚಾರಿಟಿ ಹೇಳಿದೆ. ತಂತ್ರಜ್ಞಾನದಲ್ಲಿನ ಇತ್ತೀಚಿನ ಪ್ರಗತಿಗಳು ಮತ್ತು ಆಸಕ್ತಿ ಜನ ಹೆಚ್ಚಾಗಿ ವೀಕ್ಷಿಸಲು ಸಾಧ್ಯವಾಗಿದೆ. ಒಂದು ಕಾಲದಲ್ಲಿ ಸಂಕೀರ್ಣವಾಗಿದ್ದು ದೃಶ್ಯ ಪರಿಣಾಮಗಳನ್ನು ಈಗ ಮನೆಯ ಕಂಪ್ಯೂಟರ್ ಗಳಲ್ಲಿಯೂ ಮಾಡಬಹುದಾಗಿದೆ.

ಹೆನ್ರಿ ಅಜ್ಡರ್ ಡೀಪ್‌ಫೇಕ್‌ ಗಳಲ್ಲಿ ಪ್ರಮುಖ ತಜ್ಞರು. ಅವರು ಆನ್ಲೈನ್ ತಂತ್ರಜ್ಞಾನದ ಅಭಿವೃದ್ಧಿ, ನಕಲಿ ಅಶ್ಲೀಲ ಚಿತ್ರಗಳ ಹರಿದಾಟ, ತಡೆ ಬಗ್ಗೆ ಕಾಳಜಿ ವಹಿಸಿದ್ದಾರೆ.

2017 ರಿಂದ ಡೀಪ್ ಫೇಕ್ ಕ್ರೇಜ್ ಆರಂಭವಾಗಿದೆ ಎನ್ನುವುದು ಅವರ ಅನಿಸಿಕೆ. ಬಳಕೆದಾರರು ಅಸ್ತಿತ್ವದಲ್ಲಿರುವ ಸಾಫ್ಟ್ವೇರ್ ಲೈಬ್ರರಿಗಳಿಂದ ಫೋಟೋ ಸೇರಿಸುತ್ತಾರೆ. ಯಾರಾದರೂ ಇದನ್ನು ಮಾಡಬಹುದಾಗಿದೆ. ಆದರೆ, ದುರುದ್ದೇಶ ಬಳಕೆಗಳು ಈಗ ಹೆಚ್ಚಾಗಿವೆ. ಅದನ್ನು ಗಂಭೀರವಾಗಿ ಪರಿಗಣಿಸಬೇಕು ಎನ್ನುವುದು ಹೆನ್ರಿ ಅಜ್ಡರ್ ಅಭಿಪ್ರಾಯವಾಗಿದೆ.

ಶೆಫೀಲ್ಡ್ ನಲ್ಲಿ ವಾಸಿಸುವ ಹೆಲೆನ್ ಮೊರ್ಟ್ ಬರಹಗಾರಳಾಗಿದ್ದು ಎರಡು ವರ್ಷಗಳ ಹಿಂದೆ ಅವಳು ಅಶ್ಲೀಲ ವೆಬ್ ಸೈಟ್ ನಲ್ಲಿ ತನ್ನದೇ ಚಿತ್ರಗಳನ್ನು ಕಂಡಿದ್ದಳು. 2017 ರಿಂದ ಆಕೆ ಅಂತರ್ಜಾಲದಲ್ಲಿದ್ದಳು. ಇಂತಹ ಸಂದರ್ಭದಲ್ಲಿ ನಾಚಿಕೆ ಎದುರಾಗುತ್ತದೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆ ಎಂದು ಭಾವಿಸಬಹುದಾದರೂ ಅದು ಸ್ಪಷ್ಟವಾಗಿಲ್ಲ ಎನ್ನುತ್ತಾರೆ ಅವರು.

ಎರಡು ವರ್ಷಗಳ ಹಿಂದೆ ಅವರ ಇಂತಹ 8 ಚಿತ್ರಗಳು ಕಂಡುಬಂದಿದ್ದು, ಯಾರು ಪೋಸ್ಟ್ ಮಾಡಿದ್ದಾರೆ ಎನ್ನುವುದು ಇನ್ನು ತಿಳಿದಿಲ್ಲ. ಕಾನೂನಿನಿಂದಲೂ ಪ್ರಯೋಜನವಾಗದೇ ನಿರಾಸೆ ಅನುಭವಿಸಿದ್ದಾರೆ. ಫೋಟೋಗಳನ್ನು ತೆಗೆಯಲಾಗಿದೆ. ಈಗ ನನ್ನ ಫೋಟೋಗಳು ಇಲ್ಲ. ಆದರೆ, ನಾನು ಸ್ಕ್ರೀನ್ ಶಾಟ್ ತೆಗೆದುಕೊಂಡಿದ್ದು, ಪುರಾವೆಯಾಗಿ ಇಟ್ಟುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಪೊಲೀಸರನ್ನು ಸಂಪರ್ಕಿಸುವುದ ನನ್ನ ಉದ್ದೇಶವಾಗಿತ್ತು. ಆ ಸಮಯದಲ್ಲಿ ಪೊಲೀಸರಿಗೆ ನನಗೆ ಸಹಾಯ ಮಾಡಲಾಗುವುದಿಲ್ಲ ಎಂದು ನನಗೇ ತಿಳಿದಿರಲಿಲ್ಲ. ಏಕೆಂದರೆ ಇಂಗ್ಲೆಂಡ್ ನಲ್ಲಿ ಚಿತ್ರಗಳನ್ನು ಆ ರೀತಿಯಲ್ಲಿ ನಿರ್ವಹಿಸುವುದು ಅಪರಾಧವಲ್ಲ ಎನ್ನುತ್ತಾರೆ ಹೆಲೆನ್ ಮೊರ್ಟ್.

ಡರ್ಹಾಮ್ ವಿಶ್ವವಿದ್ಯಾಲಯದ ಪ್ರೊಫೆಸರ್ ಮೆಕ್ಗ್ಲಿನ್ ಅವರು, ಇಂಗ್ಲೆಂಡ್ ನಾದ್ಯಂತ ಕಾನೂನು ಅಧ್ಯಯನ ಮಾಡಿದ್ದಾರೆ. ಆದರೆ ಅವರು ಡೀಪ್ ಫೇಕ್ ಗಳನ್ನು ಎದುರಿಸುವಲ್ಲಿ ಸ್ಕಾಟ್ಲೆಂಡ್ ಕಾನೂನು ನಂಬುತ್ತಾರೆ.

ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ಇಂತವುಗಳಿಗೆ ಕಡಿವಾಣ ಹಾಕಲು ಇರುವ ಕಾನೂನು ಪ್ರಕ್ರಿಯೆಗಳನ್ನು ಗಮನಿಸಿದ್ದೇನೆ. ಯಾರೊಬ್ಬರಾದರೂ ತೆಗೆದ ಚಿತ್ರ ಅಥವಾ ವಿಡಿಯೋ ಲೈಂಗಿಕ ಚಿತ್ರಣವಾಗಿದ್ದರೆ ಯಾವುದೇ ರೀತಿಯಲ್ಲಿ ಬದಲಾಯಿಸಲಾಗಿದ್ದರೆ ಕಾನೂನು ನೆರವು ಪಡೆಯಬಹುದು. ಯಾರಾದರೂ ಪೊಲೀಸರಿಗೆ ವರದಿ ಮಾಡಬಹುದು. ಪೊಲೀಸರು ತನಿಖೆ ಮಾಡಬೇಕು ಜೊತೆಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಲಂಡನ್‌ ನ್ಯಾಯ ಸಚಿವಾಲಯದ ಇಂಗ್ಲೆಂಡ್ ಮತ್ತು ವೇಲ್ಸ್‌ನ ಕಾನೂನುಗಳಲ್ಲಿನ ವ್ಯತ್ಯಾಸವನ್ನು ವಿವರಿಸಿದ ಅವರು, ಈ ಕ್ರೂರ ಕೃತ್ಯವನ್ನು ಅಸ್ತಿತ್ವದಲ್ಲಿರುವ ಅಪರಾಧಗಳ ಅಡಿಯಲ್ಲಿ ವಿಚಾರಣೆ ನಡೆಸಬಹುದಾದರೂ, ಕಾನೂನನ್ನು ಬಲಪಡಿಸುವ ಬಗ್ಗೆ ಸ್ವತಂತ್ರ ಪರಿಶೀಲನೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ನಾವು ಈಗಾಗಲೇ ‘ರಿವೆಂಜ್ ಪೋರ್ನ್’ ಮತ್ತು ‘ಅಪ್‌ ಸ್ಕರ್ಟಿಂಗ್’ ಅನ್ನು ನಿಭಾಯಿಸಲು ಹೊಸ ಕಾನೂನುಗಳನ್ನು ಪರಿಚಯಿಸಿದ್ದೇವೆ ಎಂದು ಪ್ರೊಫೆಸರ್ ಮೆಕ್‌ ಗ್ಲಿನ್ ಎಚ್ಚರಿಸಿದ್ದು, ಪ್ರಸ್ತುತ ಡೀಪ್‌ ಫೇಕ್‌ಗಳಿಂದ ನೊಂದವರ ಜನರ ಸಂಖ್ಯೆ ಕಡಿಮೆ ಇದ್ದರೂ, ಬೆಳೆಯುತ್ತಿರುವ ಈ ಸಮಸ್ಯೆಯನ್ನು ನಿಭಾಯಿಸುವಾಗ ನಾವು ತೃಪ್ತರಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ನಾವು ಇದನ್ನು ಈಗ ನಿಲ್ಲಿಸದಿದ್ದರೆ, ಇದು ದುರುಪಯೋಗದ ಮುಂದಿನ ಸಾಂಕ್ರಾಮಿಕವಾಗಲಿದೆ ಎಂದು ಎಚ್ಚರಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...