ನೀವು ನಂಬುತ್ತಿರೋ ಬಿಡುತ್ತಿರೋ ವಿಶ್ವ ತಾಯಂದಿರ ದಿನ, ಅಪ್ಪಂದಿರ ದಿನ , ಪ್ರೇಮಿಗಳ ದಿನ ಹೀಗೆ ಎಲ್ಲದಕ್ಕೂ ಒಂದೊಂದು ದಿನವಿರುವಂತೆ ನಿದ್ರೆಗೂ ಒಂದು ದಿನವಿದೆ. ಮಾರ್ಚ್ 15 ವಿಶ್ವ ನಿದ್ದೆಯ ದಿನ, ಈ ವಿಶ್ವ ನಿದ್ದೆಯ ದಿನದಂದು ವಿಶ್ವ ನಿದ್ದೆಯ ದಿನದ ಸಮಿತಿಯು ಮುಂದೆ ಬಂದು ಸರಿಯಾದ ಸಮಯಕ್ಕೆ ಸರಿಯಾದ ನಿದ್ದೆ ಎಂಬ ಘೊಷಣೆ ಅಡಿ ಕಾರ್ಯಕ್ರಮ ನಡೆಸಿದೆ. ಈ ಕಾರ್ಯಕ್ರಮದಲ್ಲಿ ಮಲಗುವ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.
ನಿದ್ದೆಯ ದಿನದಂದು ನೆಟ್ಟಿಗರು ಸಖತ್ ಟಿಪ್ಸ್ ಗಳನ್ನೂ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿದ್ದಾರೆ.
ಸರಿಯಾದ ಸಮಯದಲ್ಲಿ ನಿದ್ದೆ ಮಾಡಬೇಕು, ಅದಕ್ಕಾಗಿ ಯೋಗ, ಮಲಗುವ ಮುನ್ನ ಸುಂದರ ಗೀತೆ ಕೇಳುವ ಹವ್ಯಾಸ ಮೊದಲಾದ ಟಿಪ್ಸ್ ಗಳನ್ನ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಾರೆ.
ಇತ್ತೀಚಿನ ಒತ್ತಡದ ಜಗತ್ತಿನಲ್ಲಿ ನಿದ್ದೆ ಎಂಬುದು ಮರೀಚಿಕೆ ಆಗಿದೆ. ನಿದ್ದೆ ಕಡಿಮೆಯಾದಲ್ಲಿ ಆಲಸ್ಯ, ಒತ್ತಡಗಳು ಸೇರಿದಂತೆ ಕೆಲ ಕಾಯಿಲೆ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಾರೆ.