ಪಿಜ್ಜಾ ನಿಸ್ಸಂದೇಹವಾಗಿ ಅತ್ಯಂತ ಹಾನಿಕಾರಕ ಜಂಕ್ ಫುಡ್. ಆದರೆ ಜನಪ್ರಿಯ ಇಟಾಲಿಯನ್ ಆಹಾರಗಳಲ್ಲಿ ಒಂದಾಗಿದೆ. ನಾವೆಲ್ಲರೂ ಪಿಜ್ಜಾವನ್ನು ಆನಂದಿಸುತ್ತೇವೆ, ಆದರೆ ತೂಕ ಕಳೆದುಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಇದು ಉತ್ತಮ ಆಯ್ಕೆಯಲ್ಲ.
ಪಿಜ್ಜಾ ಹೆಚ್ಚಿನ ಪ್ರಮಾಣದ ಕ್ಯಾಲೋರಿಗಳು, ಕೊಬ್ಬು ಮತ್ತು ಸೋಡಿಯಂ ಅನ್ನು ಹೊಂದಿರುತ್ತದೆ, ಇದು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ಮತ್ತು ಹೃದ್ರೋಗದ ಅಪಾಯವನ್ನೂ ಹೆಚ್ಚಿಸಲು ಕಾರಣವಾಗಬಹುದು.ಆದಾಗ್ಯೂ ಪಿಜ್ಜಾ ತಿನ್ನುವ ಮೂಲಕ ತೂಕ ಕಡಿಮೆ ಮಾಡಿಕೊಂಡಿರೋ ವ್ಯಕ್ತಿಯ ಬಗ್ಗೆ ನೀವು ಕೇಳಿದ್ದೀರಾ ?
ರಿಯಾನ್ ಮರ್ಸರ್ ಎಂಬ ಐರ್ಲೆಂಡ್‌ನ ಈ ವ್ಯಕ್ತಿ ಪ್ರತಿದಿನ 10 ಪಿಜ್ಜಾವನ್ನು ಸೇವಿಸುವ ಮೂಲಕ 30 ದಿನಗಳಲ್ಲಿ ತೂಕ ಇಳಿಸಿದ್ದಾನೆ. ತನ್ನ 30 ದಿನಗಳ ಚಾಲೆಂಜ್ ಅನ್ನು ಆನ್‌ಲೈನ್‌ನಲ್ಲಿಯೂ ಹಂಚಿಕೊಂಡಿದ್ದಾನೆ. ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ರಿಯಾನ್ ಪಿಜ್ಜಾ ತಿನ್ನುತ್ತಿದ್ದ. ಈತನಿಗೀಗ 34 ವರ್ಷ. ಹೀಗೆ ಪಿಜ್ಜಾ ತಿನ್ನುತ್ತಲೇ ಈತ ಒಂದು ತಿಂಗಳಲ್ಲಿ ಮೂರೂವರೆ ಕೆಜಿ ತೂಕ ಇಳಿಸುವಲ್ಲಿ ಯಶಸ್ವಿಯಾಗಿದ್ದಾನೆ. ತನ್ನ ವೇಯ್ಟ್ ಲಾಸ್ ಜರ್ನಿಯನ್ನು ಆತ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾನೆ. ಪಿಜ್ಜಾ ತಿನ್ನುವ ಮೂಲಕ ದೇಹದ ಕೊಬ್ಬಿನ ಮಟ್ಟವನ್ನು ಕಡಿಮೆ ಮಾಡಬಹುದು ಅಂತಾ ಹೇಳಿಕೊಂಡಿದ್ದಾನೆ.
ಕ್ಯಾಲೋರಿ ಕೊರತೆ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ರಿಯಾನ್ ಎಲ್ಲಾ ರೀತಿಯ ಜಂಕ್ ಫುಡ್ ಮತ್ತು ಟೇಕ್ ಅವೇಗಳನ್ನು ತಿನ್ನುವುದನ್ನು ತ್ಯಜಿಸಿದ್ದ. ರಿಯಾನ್ ದಿನವಿಡೀ ಪಿಜ್ಜಾ ತಿನ್ನುವುದರ ಜೊತೆಗೆ ಜಿಮ್‌ನಲ್ಲಿ ವರ್ಕೌಟ್ ಸಹ ಮಾಡಿದ್ದಾನೆ. ಪ್ರತಿದಿನ 10,000 ಹೆಜ್ಜೆಗಳಷ್ಟು ವಾಕ್ ಮಾಡಿದ್ದಾನೆ. ಆದರೆ ಅನಾರೋಗ್ಯಕರ ಆಹಾರಗಳಲ್ಲೊಂದಾದ ಪಿಜ್ಜಾ ಸೇವನೆ ಮಾಡುವ ಮೂಲಕ ತೂಕ ಇಳಿಸುವುದು ಸೂಕ್ತ ಮಾರ್ಗವಲ್ಲ ಎನ್ನುತ್ತಾರೆ ತಜ್ಞರು.
(ಇದು ವ್ಯಕ್ತಿಯೊಬ್ಬರ ವೈಯಕ್ತಿಕ ಅಭಿಪ್ರಾಯದ ಸುದ್ದಿ. ವೈದ್ಯರ ಸಲಹೆಯಿಲ್ಲದೆ ಇದನ್ನು ಅನುಸರಿಸದಿರುವುದು ಸೂಕ್ತ)
https://www.instagram.com/p/Coak0_tN-JX/?utm_source=ig_embed&ig_rid=1519e3e5-05bf-4c58-9fef-fb0c1d62f6a6