ನಂದಿ ಧ್ವಜ ಹೊಂದಿದರೆ ಅದೃಷ್ಟ ಖುಲಾಯಿಸುತ್ತದೆ ಎಂಬ ನಂಬಿಕೆಯಿಂದ ಇದರ ಹರಾಜಿನಲ್ಲಿ ಮಾಜಿ ಹಾಗೂ ಹಾಲಿ ಶಾಸಕರು ಪೈಪೋಟಿಗೆ ಬಿದ್ದ ಪರಿಣಾಮ ದಾಖಲೆ ಬೆಲೆಗೆ ಹರಾಜಾಗಿದೆ. ತಪೋ ಕ್ಷೇತ್ರ ಕಗ್ಗೆರೆ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ರಥೋತ್ಸವದ ವೇಳೆ ಈ ಘಟನೆ ನಡೆದಿದೆ.
ಶ್ರೀ ಕ್ಷೇತ್ರದ ನಂದಿಧ್ವಜವನ್ನು ಹರಾಜು ಮಾಡಲು ಮುಂದಾದ ವೇಳೆ ಇದನ್ನು ಖರೀದಿಸಲು ಕುಣಿಗಲ್ ಕ್ಷೇತ್ರದ ಶಾಸಕ ಡಾ. ರಂಗನಾಥ್ ಹಾಗೂ ಮಾಜಿ ಶಾಸಕ ರಾಮಸ್ವಾಮಿಗೌಡ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆದಿದೆ.
ಅಂತಿಮವಾಗಿ ಶ್ರೀ ಕ್ಷೇತ್ರದ ಧ್ವಜ 5 ಲಕ್ಷ ರೂಪಾಯಿಗಳಿಗೆ ಹರಾಜಾಗಬಹುದು ಎಂದು ಭಕ್ತರು ಅಂದಾಜಿಸುತ್ತಿರುವಾಗಲೇ ಉಭಯ ನಾಯಕರುಗಳ ಸ್ಪರ್ಧೆಯಿಂದಾಗಿ ಬರೊಬ್ಬರಿ 16 ಲಕ್ಷ ರೂಪಾಯಿಗಳಿಗೆ ಶಾಸಕ ಡಾ. ರಂಗನಾಥ್ ನಂದಿದ್ವಜವನ್ನು ತಮ್ಮದಾಗಿಸಿಕೊಂಡಿದ್ದಾರೆ.