ಮನೆಯಲ್ಲಿ ದಿನವಿಡೀ ಫ್ಯಾನ್ ತಿರುಗುತ್ತಿರುವ ಕಾರಣಕ್ಕೆ ಧೂಳು ಹೇಗಾದರೂ ಮೂಲೆಗಳಲ್ಲಿ ಸೇರಿಕೊಂಡು ಬಿಡುತ್ತದೆ. ಇದನ್ನು ಸ್ವಚ್ಛಗೊಳಿಸಿದ ಬಳಿಕ ದಿನಪೂರ್ತಿ ಅಕ್ಷಿ ಅಕ್ಷಿ ಎಂದು ಸೀನಿ ಬಳಿಕ ಮೂಗು ಕಟ್ಟಿ ಶೀತದ ಲಕ್ಷಣ ಕಾಣಿಸಿಕೊಳ್ಳುವುದು ಸಾಮಾನ್ಯ. ಇದರ ನಿವಾರಣೆಗೆ ಏನು ಮಾಡಬಹುದು ಗೊತ್ತೇ…?
ಮನೆಯ ಯಾವುದೇ ಧೂಳಿನ ಭಾಗ ಕ್ಲೀನ್ ಮಾಡುವ ಮೊದಲೇ ಮೂಗಿಗೆ ಬಿಗಿಯಾಗಿ ಬಟ್ಟೆ ಕಟ್ಟಿಕೊಳ್ಳಿ. ತಲೆ ಮೇಲೆ ಕೂರುವ ಧೂಳು ಎಣ್ಣೆಯೊಂದಿಗೆ ಸೇರಿ ಹೊಟ್ಟಿನ ಸಮಸ್ಯೆಗೆ ಕಾರಣವಾಗಬಹುದು. ಅದರ ಪರಿಹಾರಕ್ಕಾಗಿ ತಲೆಗೂ ಒಂದು ಸ್ಕಾರ್ಪ್ ಸುತ್ತಿಕೊಳ್ಳುವುದು ಒಳ್ಳೆಯದು.
ಹೀಗಿದ್ದೂ ಶೀತ, ಕೆಮ್ಮು ಜೊತೆಗೆ ಅಲರ್ಜಿಯ ಲಕ್ಷಣಗಳು ಕಂಡುಬಂದರೆ ಬಿಸಿ ನೀರಿಗೆ ಜೇನುತುಪ್ಪ ಬೆರೆಸಿ ಕುಡಿಯಿರಿ. ದಪ್ಪನೆಯ ಹಾಲು ಅಥವಾ ಹಾಲಿನ ಕೆನೆಗೂ ಡಸ್ಟ್ ಅಲರ್ಜಿ ನಿವಾರಿಸುವ ಗುಣವಿದೆ.
ಧೂಳಿನ ಕಾರಣಕ್ಕೆ ವಿಪರೀತ ಸೀನು ಬರುತ್ತಿದ್ದರೆ ಒಂದು ಲೋಟ ನೀರಿಗೆ 1 ಚಮಚ ಆಪಲ್ ಸೈಡರ್ ವಿನಿಗರ್ ಬೆರೆಸಿ ಮೂರು ಬಾರಿ ಕುಡಿಯುವುದು ಒಳ್ಳೆಯದು. ನೀರನ್ನು ಕುದಿಸಿ ಅದಕ್ಕೆ ನಾಲ್ಕು ಎಲೆ ತುಳಸಿ ಹಾಕಿ ಅದರ ಆವಿಯನ್ನು ತೆಗೆದುಕೊಳ್ಳಿ. ಇದರಿಂದ ಕಟ್ಟಿದ ಮೂಗಿನ ಸಮಸ್ಯೆ ದೂರವಾಗಿ ಮೂಗಿನಿಂದ ನೀರು ಇಳಿಯುವುದು ನಿಲ್ಲುತ್ತದೆ.
ವಿಟಮಿನ್ ಸಿ ಇರುವ ಆಹಾರ ಸೇವಿಸುವುದು ಇದಕ್ಕೆ ಉತ್ತಮ ಪರಿಹಾರ. ನಿಂಬೆಹಣ್ಣು, ಕಿತ್ತಳೆ ಮೊದಲಾದ ಹಣ್ಣುಗಳನ್ನು ಸೇವಿಸಿ. ಇವು ಧೂಳಿನಿಂದ ಉಂಟಾದ ಅಲರ್ಜಿಯನ್ನು ನಿವಾರಿಸಲು ಉತ್ತಮವಾಗಿ ಕೆಲಸ ಮಾಡುತ್ತವೆ.