2004 ರಲ್ಲಿ ಹೊರಬಂದ ಅಭಿಷೇಕ್ ಬಚ್ಚನ್, ಜಾನ್ ಅಬ್ರಹಾಂ, ಉದಯ್ ಚೋಪ್ರಾ ಮತ್ತು ಇಶಾ ಡಿಯೋಲ್ ಅಭಿನಯದ ಧೂಮ್ ಚಿತ್ರದ ಹಾಡು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಸುಮಾರು 10 ವರ್ಷಗಳ ಬಳಿಕ ಈ ಹಾಡು ವೈರಲ್ ಆಗುವುದರ ಹಿಂದೆ ಅಚ್ಚರಿ, ಕಾರಣವೂ ಇದೆ.
ಸೂಪರ್ಹಿಟ್ ಚಲನಚಿತ್ರವಾಗಿರುವ ಧೂಮ್ನ ‘ಧೂಮ್ ಮಚಾಲೆ’ ಹಾಡು ಇಂದಿಗೂ ಎವರ್ಗ್ರೀನ್. ಹಲವರು ಈ ನೃತ್ಯಕ್ಕೆ ಮೈ ಕುಣಿಸುವುದು ಉಂಟು. ಆದರೆ ಅಸಲಿ ಹಾಡಿನಲ್ಲಿಯೇ ಅಂದರೆ ಇಶಾ ಡಿಯಾಲ್ ಈ ಹಾಡಿಗೆ ನೃತ್ಯ ಮಾಡುವಾಗ ಒಂದು ದೃಶ್ಯ ಯಾರ ಗಮನಕ್ಕೂ ಬಂದಿರಲಿಲ್ಲ. ಅದೇ ಈಗ ವೈರಲ್ ಆಗಿದೆ.
ಕಲಾವಿದ ಅನುರಾಗ್ ಸಲ್ಗಾಂವ್ಕರ್ ಮತ್ತು ಅವರ ಸ್ನೇಹಿತ ಚಿರಾಗ್ ಸಂಭವನೀಯ ಬ್ಲೂಪರ್ ವಿಚಿತ್ರ ದೃಶ್ಯವನ್ನು ಕಂಡುಹಿಡಿದಿದ್ದು, ಇದು ಇಶಾ ಡಿಯಾಲ್ನ ಭಯಾನಕ ದೃಶ್ಯ ಎಂದು ಹೇಳಿದ್ದಾರೆ.
ಧೂಮ್ ಮಚಾಲೆ ಹಾಡಿನ ವಿಡಿಯೋ ನೋಡಿದರೆ ಅದರಲ್ಲಿ 4:31ನೇ ನಿಮಿಷದಲ್ಲಿ ಒಂದು ದೃಶ್ಯವಿದೆ. ಅದು ಸಾಮಾನ್ಯವಾಗಿ ಡಾನ್ಸ್ ಮಾಡುವಾಗ ಜನರ ಕಣ್ಣಿಗೆ ಕಾಣುವುದಿಲ್ಲ. ಆದರೆ ಜೂಮ್-ಇನ್ ಮಾಡಿದಾಗ ಇಶಾ ಡಿಯಾಲ್ನ ಭಯಾನಕ ಮುಖವನ್ನು ಕಾಣಬಹುದು. ಇದೀಗ ವೈರಲ್ ಆಗಿದ್ದು, ಥಹರೇವಾರಿ ಕಮೆಂಟ್ಗಳು ಬರುತ್ತಿವೆ.