ಧೂಮಪಾನ ಅನ್ನೋದು ತುಂಬಾ ಅಪಾಯಕಾರಿ. ಸಿಗರೇಟ್ ಕ್ಯಾನ್ಸರ್, ಪಾರ್ಶ್ವವಾಯು, ಹೃದಯ ಹಾಗೂ ಶ್ವಾಸಕೋಶದ ಖಾಯಿಲೆಗಳಿಗೆ ಕಾರಣವಾಗುವುದು ಮಾತ್ರವಲ್ಲದೇ ದೇಹದ ಪ್ರತಿಯೊಂದು ಭಾಗಕ್ಕೂ ಇದು ಮಾರಕ. ಗಟ್ಟಿ ಮನಸ್ಸು ಮಾಡಿ ಈ ಚಟದಿಂದ ಮುಕ್ತಿ ಹೊಂದಿದರೆ ಕೆಲವೇ ನಿಮಿಷಗಳಲ್ಲಿ ನೀವು ನಿಮ್ಮ ದೇಹದಲ್ಲಿನ ಬದಲಾವಣೆ ಗುರುತಿಸಬಹುದಾಗಿದೆ.
ನೀವು ಕೊನೇ ಸಿಗರೇಟ್ ಸೇದಿ 20 ನಿಮಿಷದ ನಂತರ ನಿಮ್ಮ ರಕ್ತದೊತ್ತಡ ಹಾಗೂ ಹೃದಯ ಬಡಿತ ಸಾಮಾನ್ಯ ಸ್ಥಿತಿಗೆ ಬರುತ್ತೆ.
8 ಗಂಟೆಗಳ ನಂತರ ರಕ್ತದಲ್ಲಿರುವ ನಿಕೊಟಿನ್ ಹಾಗೂ ಕಾರ್ಬನ್ ಮೊನೊಕ್ಸೈಡ್ ಕಡಿಮೆಯಾಗಿ ಆಮ್ಲಜನಕದ ಪ್ರಮಾಣ ಹೆಚ್ಚಾಗುತ್ತದೆ.
2 ದಿನಗಳ ನಂತರ ಶ್ವಾಸಕೋಶಗಳು ಸ್ವಚ್ಛವಾಗುತ್ತವೆ. ರುಚಿ ಹಾಗೂ ವಾಸನೆ ಗ್ರಹಿಸುವ ಸಾಮರ್ಥ್ಯ ಹೆಚ್ಚಾಗುತ್ತದೆ.
3 ದಿನಗಳ ನಂತರ ಉಸಿರಾಟ ಸುಲಭವಾಗುತ್ತದೆ. ಸಶಕ್ತ ಎನ್ನಿಸತೊಡಗುತ್ತದೆ. ಸಿಗರೇಟ್ ಬಿಟ್ಟೊಡನೆ ಕೆಲವರಿಗೆ ಭಾವನೆಗಳ ಏರಿಳಿತ, ಅಸಹನೆ, ತಲೆನೋವು ಕಾಣಿಸಿಕೊಳ್ಳಬಹುದು ಆದರೆ ಇದು ತಾತ್ಕಾಲಿಕ.
2-12 ವಾರಗಳ ನಂತರ ನಿಕೊಟಿನ್ ಇಲ್ಲದೇ ನಿಮ್ಮ ದೇಹ ಹೊಂದಿಕೊಳ್ಳತೊಡಗುತ್ತದೆ.
3 ರಿಂದ 9 ತಿಂಗಳ ನಂತರ ಕೆಮ್ಮು, ಉಬ್ಬಸ, ಉಸಿರಾಟ ಎಲ್ಲವೂ ನಿಯಂತ್ರಣಕ್ಕೆ ಬರುತ್ತವೆ.
1 ವರ್ಷದ ನಂತರ ಸಿಗರೇಟ್ ಸೇದುವವರಿಗಿಂತ ಹೃದಯ ಖಾಯಿಲೆ ಬರುವ ಪ್ರಮಾಣ ಅರ್ಧದಷ್ಟು ಕಡಿಮೆಯಾಗುತ್ತದೆ.
10 ವರ್ಷಗಳ ನಂತರ ಶ್ವಾಸಕೋಶ ಕ್ಯಾನ್ಸರ್ ಬರುವ ಪ್ರಮಾಣ ಅರ್ಧದಷ್ಟು ಇಳಿಕೆಯಾಗುತ್ತದೆ.
15 ವರ್ಷಗಳ ನಂತರ ಹೃದಯಾಘಾತದ ಪ್ರಮಾಣವೂ ಕಡಿಮೆಯಾಗುತ್ತದೆ.