ಬೇಕಾಗುವ ಸಾಮಾಗ್ರಿಗಳು:
ಮಂಗಳೂರು ಸೌತೆ – 1, ತೊಂಡೆಕಾಯಿ 10 ರಿಂದ 15, ತೆಂಗಿನಕಾಯಿ ತುರಿ – 1 ಕಪ್, ಮೆಣಸಿನಕಾಯಿ – 8 ರಿಂದ 9 (ಖಾರಕ್ಕೆ ಅನುಗುಣವಾಗಿ), ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ:
ಸೌತೆ ಹಾಗೂ ತೊಂಡೆಕಾಯಿಯನ್ನು ಸಣ್ಣಗೆ ಕಟ್ ಮಾಡಿ ಪಾತ್ರೆಗೆ ನೀರು ಹಾಕಿ ಬೇಯಿಸಲು ಇಡಿ. ಜೊತೆಗೆ ಉಪ್ಪು ಕೂಡ ಸೇರಿಸಿ. ಬಳಿಕ ತೆಂಗಿನಕಾಯಿಯನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. ಜೊತೆಗೆ ಮೆಣಸಿನಕಾಯಿ ಸೇರಿಸಬೇಕು.
ಸರಿಯಾಗಿ ಕುದಿ ಬಂದಾಗ ಮಜ್ಜಿಗೆ ಸೇರಿಸಿ. ಬಳಿಕ ಸ್ಟೌವ್ ಮೇಲಿಂದ ಕೆಳಗಿಳಿಸಿ, ಸಾಸಿವೆ, ಕರಿಬೇವಿನ ಒಗ್ಗರಣೆ ಹಾಕಿದರೆ ಕಾಯಿಹುಳಿ ರೆಡಿ.