![](https://kannadadunia.com/wp-content/uploads/2022/10/raaam1485091489039-1024x688-1.jpg)
ಇಂದು ನವರಾತ್ರಿಯ ಕಡೆಯ ದಿನ ವಿಜಯದಶಮಿ. ಪಾಂಡವರು ಶತ್ರುಗಳ ಮೇಲೆ ಜಯ ಸಾಧಿಸಿದ ದಿನವೆಂದು ಹೇಳಲಾಗುತ್ತದೆ. ಆಶ್ವಯುಜ ಮಾಸ ಶುಕ್ಲಪಕ್ಷದ ಹತ್ತನೆಯ ದಿನದಂದು ದಶಮಿಯನ್ನು ಆಚರಿಸಲಾಗುತ್ತದೆ. ರಾಮನು ರಾವಣನನ್ನು ಸಂಹರಿಸಿದ ಶುಭ ದಿನವೆಂದು ಹೇಳಲಾಗುತ್ತದೆ.
ಹಾಗಾಗಿ ಇಂದು ಆರಂಭಿಸಿದ ಯಾವುದೇ ಕೆಲಸದಲ್ಲಿ ಶುಭ ಪ್ರಾಪ್ತಿಯಾಗುತ್ತದೆ. ಸಂಸಾರಿಕ ಸಮಸ್ಯೆಯನ್ನು ದೂರ ಮಾಡಲು ಮಾಡುವಂತಹ ಯಾವುದೇ ಕೆಲಸ ವಿಫಲವಾಗುವುದಿಲ್ಲ.
ವಿಜಯದಶಮಿಯಂದು ಯಾತ್ರೆ ಮಾಡುವುದು ಬಹಳ ಒಳ್ಳೆಯದು. ದೂರದ ಊರಿಗೆ ಹೋಗಬೇಕೆಂದೇನಿಲ್ಲ. ಚಿಕ್ಕ ಪ್ರವಾಸವನ್ನು ಮಾಡಿ.
ಶಮಿ ಮರದ ಪೂಜೆ ಮಾಡಿ ಅದ್ರ ಎಲೆಯನ್ನು ಕಪಾಟಿನಲ್ಲಿಡುವುದರಿಂದ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ.
ಮನೆಯಲ್ಲಿಟ್ಟ ಕಳಶವನ್ನು ಸ್ವಲ್ಪ ಸಮಯ ತಲೆಯ ಮೇಲೆ ಹೊತ್ತುಕೊಳ್ಳುವುದರಿಂದ ಭಗವತಿ ದೇವಿಯ ಆಶೀರ್ವಾದ ಲಭಿಸುತ್ತದೆ.
ಮನೆಯ ತ್ರಿಜೋರಿ ತುಂಬಿರಬೇಕೆಂದಾದಲ್ಲಿ 10 ವರ್ಷ ಕಡಿಮೆ ವಯಸ್ಸಿನ ಕನ್ಯೆಗೆ ಆಕೆಯ ಪ್ರೀತಿಯ ಬಟ್ಟೆಯನ್ನು ದಾನ ಮಾಡಿ. ನಂತ್ರ ಆಕೆ ಕೈನಿಂದ ಹಣವನ್ನು ತಿಜೋರಿಯಲ್ಲಿಡಿಸಿ.
ದುರ್ಗಾ ದೇವಸ್ಥಾನಕ್ಕೆ ಹೋಗಿ ತಾಯಿ ದೇವಿಯ ಹಣೆಗೆ ಹಚ್ಚಿರುವ ತಿಲಕವನ್ನು ಪ್ರಸಾದವಾಗಿ ಸ್ವೀಕರಿಸಿ. ಸ್ವಲ್ಪ ಕುಂಕುಮವನ್ನು ಮನೆಗೆ ತಂದಿಡಿ. ಮನೆಯಲ್ಲಿ ಸೌಭಾಗ್ಯ, ಸಮೃದ್ಧಿ ನೆಲೆಸಿರುತ್ತದೆ.